ರಾಮನಗರ[ಸೆ.16]: ಅನರ್ಹ ಶಾಸ​ಕರು ತ್ರಿಶಂಕು ಸ್ಥಿತಿ​ಯ​ಲ್ಲಿ​ರು​ವು​ದನ್ನು ಎಲ್ಲರೂ ನೋಡು​ತ್ತಿ​ದ್ದಾರೆ. ಹೀಗಿ​ರು​ವಾಗ ಯಾವ ಶಾಸ​ಕರು ತಾನೇ ಪಕ್ಷ ತೊರೆದು ರಾಜ​ಕೀಯ ಭವಿಷ್ಯ ಹಾಳು ಮಾಡಿ​ಕೊ​ಳ್ಳಲು ಬಯ​ಸು​ತ್ತಾರೆ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಪ್ರಶ್ನಿ​ಸಿ​ದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅತೃಪ್ತ ಶಾಸಕರ ಸ್ಥಿತಿ ನೋಡಿದ ಬಳಿಕ ಈಗಿರುವ ಶಾಸಕರು ಭವಿಷ್ಯ ಹಾಳು ಮಾಡಿಕೊಳ್ಳಲು ಸಿದ್ಧರಿಲ್ಲ. ಅಲ್ಲದೆ, ಬೇರೆ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದರು.

ಮತ್ತೆ ಬಿಎಸ್‌ವೈ ಮನೆಗೆ ಹೆಜ್ಜೆ ಹಾಕಿದ ಜೆಡಿಎಸ್‌ ಶಾಸಕ ಜಿಟಿಡಿ!

ಮಾಜಿ ಸಚಿವ ಜಿ.ಟಿ. ದೇವೇಗೌಡರವರು ತಮ್ಮ ಕ್ಷೇತ್ರದ ಅಭಿ​ವೃದ್ಧಿ ಕಾರ್ಯ​ಗಳ ವಿಚಾ​ರ​ವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿ​ಯೂ​ರಪ್ಪ ಅವ​ರನ್ನು ಭೇಟಿ​ಯಾ​ಗಿ​ದ್ದಾರೆ. ಅದರಲ್ಲಿ ತಪ್ಪೇ​ನಿದೆ? ನಾನೂ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಭೇಟಿ ಮಾಡುತ್ತೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾದಾಕ್ಷಣ ಪಕ್ಷ ಬಿಡುತ್ತಾರೆ ಎಂದು ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.