Asianet Suvarna News Asianet Suvarna News

ಸರ್ಕಾರದ ವಿರುದ್ಧ ವಿಷ್ಣು ಅಳಿಯ ಗರಂ

ಸರ್ಕಾರದ ವಿರುದ್ಧ ವಿಷ್ಣು ಅಳಿಯ ಅನಿರುದ್ಧ್ ಅವರು ಗರಂ ಆಗಿದ್ದಾರೆ. ವಿಷ್ಣು ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ 10 ವರ್ಷವಾದರೂ ವಿಚಾರ ಬಗೆಹರಿಯದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Anirudh unhappy Over Karnataka Govt
Author
Bengaluru, First Published Nov 28, 2018, 8:59 AM IST

ಬೆಂಗಳೂರು : ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣ ಸಂಬಂಧ ಕಳೆದ ಒಂಬತ್ತು ವರ್ಷಗಳಿಂದ ಹೋರಾಡುತ್ತಿ ದ್ದೇವೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಲು ಆರು ವರ್ಷ ಕಾಯುತ್ತಿದ್ದೆವು. ಪ್ರಸ್ತುತ ಮೈಸೂರಿನಲ್ಲಿ ಗುರುತಿಸಿರುವ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗು ವುದೆಂದು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದೇವೆ.

ಏಕಾಏಕಿ ಸ್ಥಳ ಬದಲಾಯಿಸುತ್ತೇವೆ ಎಂದರೆ ನಾವು ಒಪ್ಪುವುದಿಲ್ಲ ಎಂದರು. ಸ್ಮಾರಕ ನಿರ್ಮಾಣಕ್ಕಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಐದು ಸ್ಥಳಗಳನ್ನು ಸರ್ಕಾರವೇ ತೋರಿಸಿದೆ. ಆದಷ್ಟು ಶೀಘ್ರದಲ್ಲಿ ಸ್ಮಾರಕ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ಇದೇ ಭರವಸೆಯನ್ನು ನಾವು ನಂಬಿದ್ದೇವೆ. ಜೊತೆಗೆ, ಮೈಸೂರಿನಲ್ಲಿ ಗುರುತಿಸಿರುವ ಸ್ಥಳದಲ್ಲಿ ಪ್ರಾರ್ಥಮಿಕ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಒಂದು ಕೊಳವೆ ಬಾವಿ ಕೊರೆಸಲಾಗಿದೆ. 

ಹೀಗಿರುವಾಗ ರೈತರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಆದ್ದರಿಂದ ರೈತರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರವೇ ಗುರುತಿ ಸಿರುವ ಸ್ಥಳವನ್ನು ನಾವು ಒಪ್ಪಿಕೊಂಡಿ ದ್ದೇವೆ. ಆದರೂ, ಪದೇ ಪದೇ ಸ್ಥಳ ಬದಲಾಯಿಸಲಾಗುತ್ತಿದೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಹೇಳಿ ಮತ್ತೆ ಬೆಂಗಳೂರಿನಲ್ಲಿ ಜಾಗ ತೋರಿಸಿದರೆ ನಾವು ಒಪ್ಪುವುದಿಲ್ಲ. ಪ್ರಸ್ತುತ ಮೈಸೂರಿನಲ್ಲಿ ಗುರುತಿಸಿರು ವಲ್ಲಿ ನಿರ್ಮಾಣ ಮಾಡಿದರೆ ಉತ್ತಮ. ಡಾ.ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಬಗ್ಗೆ ಕನ್ನಡಿಗರ ಮನಸ್ಸಿನಲ್ಲಿ ವಿಶೇಷವಾದ ಗೌರವ ಇದೆ.

ಮೂವರ ಸ್ಮಾರಕ ಒಂದೇ ಕಡೆ ನಿರ್ಮಿಸಿದಲ್ಲಿ ಗುಂಪಲ್ಲಿ ಗೋವಿಂದ ಎನ್ನು ವಂತಾಗುತ್ತದೆ. ಒಂದು ವೇಳೆ ಕಂಠೀರವ ಸ್ಟುಡಿಯೋ ದಲ್ಲಿ ಸ್ಮಾರಕ ನಿರ್ಮಾಣ ಮಾಡಿದರೆ ನಮ್ಮ ಕುಟುಂಬದ ಸದಸ್ಯರು ಅಲ್ಲಿಗೆ ಹೋಗುವುದಿಲ್ಲ ಎಂದರು.

ಸಮಯ ನೀಡದ ಸಿಎಂ: ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಇಲ್ಲಿಯವರೆಗೂ ಐದು ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಕಳೆದ ಬಾರಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರ ಭೇಟಿಗೆ ಅವಕಾಶ ನೀಡಿರಲಿಲ್ಲ. 

ಸುಮಾರು 4 ತಾಸು ಅಲ್ಲಿಯೇ ಕುಳಿತಿದ್ದು ವಾಪಸ್ ಬಂದಿದ್ದೇವೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುವಂತೆ ಅವರ ಕಾರ್ಯ ದರ್ಶಿಗಳನ್ನು ಪರಿಪರಿಯಾಗಿ ಕೇಳಿಕೊಂಡರೂ ಅವಕಾಶ ನೀಡಲಿಲ್ಲ. ಈಗ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ ಎಂದು ಬೇಸರದಿಂದ  ನುಡಿದರು. ಅಪ್ಪಾಜಿ (ವಿಷ್ಣುವರ್ಧನ್) ನಮ್ಮನ್ನಗಲಿ 9 ವರ್ಷ ಕಳೆದಿದೆ. ಇನ್ನೊಂದು ವರ್ಷ ಕಳೆದರೆ 10 ವರ್ಷವಾಗಲಿದ್ದು, ನಾವು
ಸ್ಮಾರಕ ವಿಚಾರ ಮರೆಯಲಿದ್ದೇವೆ. ಅಪ್ಪಾಜಿ ಫೋಟೋ ನಮ್ಮ ಮನೆಯಲ್ಲಿದೆ, ಅದಕ್ಕೆ ನಮಸ್ಕಾರ ಹಾಕುತ್ತೇವೆ. ಈ ರೀತಿಯ ಹೇಳಿಕೆಗಳನ್ನು ನೀಡಿ ನಮಗೆ ನೋವುಂಟು ಮಾಡುವುದನ್ನು ಬಿಡಬೇಕು ಎಂದರು.

Follow Us:
Download App:
  • android
  • ios