ನವಿಲು ಹೀಗೆ ಹತ್ತಾರು ಬಗೆಯ ಪ್ರಾಣಿ-ಪಕ್ಷಿಗಳು ಇಲ್ಲಿವೆ. ಆದರೆ  ಕಾಡುಪ್ರಾಣಿಗಳಿಗೆ ಆಶ್ರಯ ನೆಪದಲ್ಲಿ ವಿಶಪ್ರಾಸನ ಮಾಡಲಾಗುತ್ತಿದೆ. ಪಕ್ಕದಲ್ಲೇ ಇರೋ ಆರಾಧ್ಯ ಸ್ಟೀಲ್ ಪ್ರೈ ಲಿಮಿಟೆಡ್  ಫ್ಯಾಕ್ಟರಿಯ ವಿಶಕಾರಿ ತ್ಯಾಜ್ಯ ನೀರು ಫಾರೆಸ್ಟ್ ಸೇರಿ ಪ್ರಾಣಿ ಪಕ್ಷಿಗಳ ಹೊಟ್ಟೆ ಸೇರುತ್ತಿದೆ.

ಇದು ಅರಣ್ಯ ಇಲಾಖೆ ಅಧಿಕಾರಿಗಳು ಗೊತ್ತಿದ್ದು ಗೊತ್ತಿದ್ದು ಕಣ್ಮುಚ್ಚಿ ಕುಳಿತಿರುವ ಒಂದು ಭಯಾನಕ ವಿಷಪ್ರಾಶನದ ಕತೆ.ಕೈಗಾರಿಕಾ ತ್ಯಾಜ್ಯ ತನ್ನ ಫಾರೆಸ್ಟ್ ಗೆ ಹರಿಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ಕಪಕ್ಕದವರು ದೂರು ಕೊಟ್ಟರು ನನಗೇನು ಗೊತ್ತಿಲ್ಲ ಎನ್ನುತ್ತಿದೆ ಅರಣ್ಯ ಇಲಾಖೆ. ಇವರ ತಾತ್ಸಾರಕ್ಕೆ ನಿತ್ಯವೂ ವಿಶಸೇವಿಸುತ್ತಿರೋದು ಮೂಕ ಪ್ರಾಣಿಗಳು. ಈ ಬಗ್ಗೆ ಒಂದು ಎಕ್ಸಕ್ಲೂಸಿವ್ ಸ್ಟೋರಿ ಇಲ್ಲಿದೆ.

ದಾವಣಗೆರೆ ಜಿಲ್ಲೆಯ ಆನಗೋಡು-ಹೆಬ್ಬಾಳ ಎನ್ ಹೆಚ್ 4 ರಸ್ತೆ ಮಧ್ಯೆ 144 ಎಕರೆ ರಿಸರ್ವ್ ಫಾರೆಸ್ಟ್ ಇದೆ. ಇಲ್ಲಿ ಇಂದಿರಾ ಪ್ರಿಯದರ್ಶಿನಿ ಎಂಬ ಮಿನಿ ಪ್ರಾಣಿಸಂಗ್ರಹಾಲಯವಿದೆ. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಸೆರೆಸಿಕ್ಕ ಕಾಡು ಪ್ರಾಣಿಗಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತಿದೆ. ಜಿಂಕೆ, ಕಡವೆ, ಸಾರಂಗ,ಕರಡಿ.. ನವಿಲು ಹೀಗೆ ಹತ್ತಾರು ಬಗೆಯ ಪ್ರಾಣಿ-ಪಕ್ಷಿಗಳು ಇಲ್ಲಿವೆ. ಆದರೆ ಕಾಡುಪ್ರಾಣಿಗಳಿಗೆ ಆಶ್ರಯ ನೆಪದಲ್ಲಿ ವಿಶಪ್ರಾಸನ ಮಾಡಲಾಗುತ್ತಿದೆ. ಪಕ್ಕದಲ್ಲೇ ಇರೋ ಆರಾಧ್ಯ ಸ್ಟೀಲ್ ಪ್ರೈ ಲಿಮಿಟೆಡ್ ಫ್ಯಾಕ್ಟರಿಯ ವಿಶಕಾರಿ ತ್ಯಾಜ್ಯ ನೀರು ಫಾರೆಸ್ಟ್ ಸೇರಿ ಪ್ರಾಣಿ ಪಕ್ಷಿಗಳ ಹೊಟ್ಟೆ ಸೇರುತ್ತಿದೆ.

ಕಾರ್ಖಾನೆ ತ್ಯಾಜ್ಯ ಅಂತರ್ಜಲವನ್ನು ವಿಷವಾಗಿಸಿದೆ

ಫ್ಯಾಕ್ಟರಿ ತ್ಯಾಜ್ಯ ಅಂತರ್ಜಲವನ್ನೇ ವಿಶವಾಗಿಸಿದೆ. ಪಾರ್ಕ್ನಲ್ಲಿರೋ ಬೋರ್'ವೆಲ್ ನೀರನ್ನು ಪ್ರಾಣಿಗಳಿಗೆ ಪೂರೈಸಲಾಗುತ್ತೆ. ಇದೇ ನೀರನ್ನ ಹಿಂದೆ ಸಿಬ್ಬಂದಿಯೂ ಕುಡಿಯುತ್ತಿದ್ದರು. ಮಂಡಿ ನೋವಿನಂತ ಸಮಸ್ಯೆ ಕಾಣಿಸಿಕೊಂಡಿ ನಂತರ ಈ ನೀರನ್ನು ಬಳಸುವುದು ಬಿಟ್ಟಿದ್ದಾರೆ.

ಸ್ಟೀಲ್ ಪ್ಯಾಕ್ಟರಿ ಸುತ್ತಮುತ್ತಲ ಬಡವಾಣೆಗಳಲ್ಲೂ ಬಳಸೋ ನೀರಲ್ಲಿ ಸೀಸ ಆಸಿಡ್ ಅಂಶ ಇರೋದು ಲ್ಯಾಬ್ ಪರೀಕ್ಷೆಯಲ್ಲಿ ಬಯಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಖಾನೆ ಮಾಲೀಕರ ಜೊತೆ ಶಾಮೀಲಾಗಿ ಲ್ಯಾಬ್ ವರದಿಯ ಸತ್ಯಾಂಶವನ್ನೇ ಮುಚ್ಚಿಡುತ್ತಿದ್ದಾರಂತೆ. ಪರಿಸರ ಸಚಿವಾಲಯ ಎಚ್ಚೆತ್ತುಕೊಂಡು ಮೂಕ ಪ್ರಾಣಿಗಳ ವಿಷಪ್ರಾಶನಕ್ಕೆ ಬ್ರೇಕ್ ಹಾಕಬೇಕಿದೆ