ನವದೆಹಲಿ(ಜು.19): ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಹೆಸರು ಅನಿವಾರ್ಯವಾಗಿದ್ದು, ನೆಹರೂ, ಗಾಂಧಿ ಪರಿವಾರದ ವ್ಯಕ್ತಿಯೇ ಪಕ್ಷದ ಅಧ್ಯಕ್ಷರಾಗಿರಬೇಕು ಎಂದು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಗ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರಕ್ಕೆ ಸೇರಿದ ವ್ಯಕ್ತಿಯೇ ಅಧ್ಯಕ್ಷರಾಗಬೇಕು. ಇಲ್ಲದಿದ್ದರೆ ಪಕ್ಷ ಹಲವು ಸಣ್ಣಪುಟ್ಟ ಪ್ರಾಂತೀಯ ಪಕ್ಷಗಳಾಗಿ ಹೋಳಾಗಲಿದೆ ಎಂದು ಅನಿಲ್ ಶಾಸ್ತ್ರಿ ಎಚ್ಚರಿಸಿದ್ದಾರೆ.

ಪಕ್ಷದ ಹೈಕಮಾಂಡ್ ಸದೃಢವಾಗಿರದಿದ್ದರೆ ಪಕ್ಷ ಹಲವು ಸಣ್ಣಪುಟ್ಟ ಪ್ರಾಂತೀಯ ಪಕ್ಷಗಳಾಗಿ ಒಡೆಯಲಿದೆ ಎಂದಿರುವ ಅನಿಲ್, ಟಿಎಂಸಿ, ಎನ್’ಸಿಪಿ, ವೈಎಸ್’ಆರ್’ಪಿ ಪಕ್ಷಗಳು ಇದಕ್ಕೆ ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳಿರುವ ಅನಿಲ್, ಪ್ರಿಯಾಂಕಾ ಅವರನ್ನು ಹೊರತುಪಡಿಸಿದರೆ ಪಕ್ಷದ ಚುಕ್ಕಾಣಿ ಹಿಡಿಯಬಲ್ಲ ಕ್ಷಮತೆ ಸದ್ಯ ಯಾರಲ್ಲೂ ಇಲ್ಲ ಎಂದು ಹೇಳಿದ್ದಾರೆ.