ಪ್ರತಿಷ್ಟಿತ ವಾಚ್ ಕಂಪನಿಯಿಂದ ಕುಂಬ್ಳೆ ಪತ್ನಿ ಪಾನ್’ಕಾರ್ಡ್ ದುರ್ಬಳಕೆ

Anil Kumble Wife PAN card misuse
Highlights

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ಚೇತನಾರವರ  ಪಾನ್ ಕಾರ್ಡ್ ದುರ್ಬಳಕೆಯಾಗಿದೆ.   ಚೇತನಾ ಪಾನ್ ಕಾರ್ಡ್ ಬಳಸಿ 32.96 ಲಕ್ಷ ಮೌಲ್ಯದ ವಾಚನ್ನು  ಮುಂಬೈನ "ದಿ ಟೈಮ್ ಕೀಪರ್ಸ್ ವಾಚ್ ಬಾಟಿಕ್ " ಕಂಪನಿ  ಮಾರಾಟ ಮಾಡಿದೆ.  ಕಂಪನಿ ವಿರುದ್ಧ  ಚೇತನಾ ಕಬ್ಬನ್ ಪಾರ್ಕ್ ಪೊಲೀಸ್  ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.  

ಬೆಂಗಳೂರು (ಮಾ. 31):  ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ಚೇತನಾರವರ  ಪಾನ್ ಕಾರ್ಡ್ ದುರ್ಬಳಕೆಯಾಗಿದೆ.   ಚೇತನಾ ಪಾನ್ ಕಾರ್ಡ್ ಬಳಸಿ 32.96 ಲಕ್ಷ ಮೌಲ್ಯದ ವಾಚನ್ನು  ಮುಂಬೈನ "ದಿ ಟೈಮ್ ಕೀಪರ್ಸ್ ವಾಚ್ ಬಾಟಿಕ್ " ಕಂಪನಿ  ಮಾರಾಟ ಮಾಡಿದೆ.  ಕಂಪನಿ ವಿರುದ್ಧ  ಚೇತನಾ ಕಬ್ಬನ್ ಪಾರ್ಕ್ ಪೊಲೀಸ್  ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.  

ಪ್ರತಿಷ್ಠಿತ  'ಫ್ರಾಂಕ್ ಮುಲ್ಲರ್' ಬ್ರಾಂಡ್‌ನ ವಾಚಲ್ಲಿ  ಚೇತನಾ ಆಸಕ್ತಿ ಹೊಂದಿದ್ದರು.  ಈ ಬಗ್ಗೆ ವಿಚಾರಿಸಲು ಯುಬಿ ಸಿಟಿಯ 'ಜಿಮ್ಸನ್ ವಾಚ್ಸ್‌' ಮಳಿಗೆಗೆ ಚೇತನಾ ತೆರಳಿದ್ದರು.  ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಸತ್ಯ ವಾಗೀಶ್ವರನ್ ಪರಿಚಯವಾಗಿತ್ತು.  ಆತ ನಮ್ಮ ಮಳಿಗೆಯಲ್ಲಿ ಆ ಬ್ರಾಂಡ್‌ನ ವಾಚ್ ಇಲ್ಲ.  ಮುಂಬೈನ 'ದಿ ಟೈಮ್‌ ಕೀಪರ್ಸ್ ವಾಚ್ ಬಾಟಿಕ್' ಮಳಿಗೆಯಲ್ಲಿ ವಾಚ್ ಸಿಗುತ್ತೆ.   ಬೇಕೆಂದರೆ ಅಲ್ಲಿಂದ ತರಿಸಿಕೊಡುತ್ತೇನೆ' ಎಂದು ಹೇಳಿದ್ದರು.  ಇದಕ್ಕೆ ಚೇತನಾ ಒಪ್ಪಿದ್ದರು. ಬಳಿಕ ಕೆಲ ದಿನಗಳಲೇ ವಾಗೀಶ್ವರನ್ ವಾಚ್ ತರಿಸಿದ್ದ.  ವಾಚ್ ಮೆಚ್ಚಿದ ಚೇತನಾ 8 ಲಕ್ಷ ಚೆಕ್ ಕೊಟ್ಟು ವಾಚ್ ಖರೀದಿಸಿದ್ದರು.  ಈ ವೇಳೆ ಪಾನ್‌ಕಾರ್ಡ್‌ನ ಮಾಹಿತಿಯನ್ನೂ ನೀಡಿದ್ದರು. 

ಇತ್ತೀಚೆಗೆ ತೆರಿಗೆ ಮಾಹಿತಿಯನ್ನು ನೋಡಿದಾಗ ವಂಚನೆ ಬೆಳಕಿಗೆ ಬಂದಿದೆ.  ತೆರಿಗೆ ಇಲಾಖೆ ನೀಡಿದ್ದ ಫಾರಂ ನಂ 26ಎಎಸ್ ಅನ್ನು ಪರಿಚಿತ ಆಡಿಟರ್ ಎಚ್‌.ಸಿ.ಕಿಂಚ ಪರಿಶೀಲಿಸಿದಾಗ  32.96 ಲಕ್ಷ ಮೌಲ್ಯದ ಎರಡು ವಾಚ್‌’ಗಳನ್ನು ಖರೀದಿಸಿರುವುದಾಗಿ ನಮೂದಿಸಲಾಗಿತ್ತು. ಅದಕ್ಕೆ ಮುಂಬೈನ ಕಂಪನಿ 32,956 ಟಿಸಿಎಸ್ (ತೆರಿಗೆ ಸಂಗ್ರಹ) ತೋರಿಸಿದ್ದರು.  ನಂಬಿಕೆ  ದ್ರೋಹ (ಐಪಿಸಿ 406) ಹಾಗೂ ವಂಚನೆ (420) ಆರೋಪಗಳಡಿ ಪ್ರಕರಣ ದಾಖಲು ಮಾಡಿದ್ದಾರೆ. 
 

ವರದಿ: ರಮೇಶ್ ಕೆ ಎಚ್, ಸುವರ್ಣ ನ್ಯೂಸ್ 

loader