ದಿಢೀರ್ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದು ಮಾಡಿ ಕಪ್ಪುಹಣ ಮತ್ತು ಭಯೋತ್ಪಾದನೆ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಅಂದಹಾಗೆ, ಈ  ಆಲೋಚನೆ ನರೇಂದ್ರಮೋದಿಗೆ ಹೇಗೆ ಬಂತು..? ಈ ಐಡಿಯಾ ಕೊಟ್ಟವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನವದೆಹಲಿ(ನ.10): ದಿಢೀರ್ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದು ಮಾಡಿ ಕಪ್ಪುಹಣ ಮತ್ತು ಭಯೋತ್ಪಾದನೆ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಅಂದಹಾಗೆ, ಈ ಆಲೋಚನೆ ನರೇಂದ್ರಮೋದಿಗೆ ಹೇಗೆ ಬಂತು..? ಈ ಐಡಿಯಾ ಕೊಟ್ಟವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನರೇಂದ್ರಮೋದಿಗೆ ಈ ಐಡಿಯಾ ಕೊಟ್ಟವರು ಐಎಎಸ್ ಆಫೀಸರ್`ಗಳಲ್ಲ ಒಬ್ಬ ಚಾರ್ಟೆಡ್ ಅಕೌಂಟೆಂಟ್.ಔರಂಗಾಬಾದ್ ಮೂಲದ `ಅರ್ಥಕ್ರಾಂತಿ' ಎಂಬ ಸಿದ್ಧಾಂತವನ್ನ ಪ್ರತಿಪಾದಿಸಿದ ಚಾರ್ಟೆಡ್ ಅಕೌಂಟೆಂಟ್ ಅನಿಲ್ ಬೋಕಿಲ್, 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದುಮಾಡುವ ಈ ಐಡಿಯಾವನ್ನ ಮೋದಿಗೆ ಕೊಟ್ಟಿದ್ದರು.

ಕಪ್ಪುಹಣ ತಡೆ ಕುರಿತಾಗಿ ತಮ್ಮ ಸಿದ್ಧಾಂತವನ್ನ ಮಂಡಿಸಲು ಅನಿಲ್ ಬೋಕಿಲ್, ಜುಲೈನಲ್ಲಿ ಪ್ರಧಾನಮಮತ್ರಿ ಮೋದಿಯವರನ್ನ ಭೇಟಿಮಾಡಿದ್ದರು. ವರದಿಗಳ ಪ್ರಕಾರ, 8 ನಿಮಿಷ ಮಾತ್ರ ಮೋದಿ ಭೇಟಿಗೆ ಅವಕಾಶ ಸಿಕ್ಕಿತ್ತು. ಅನಿಲ್ ಸಿದ್ಧಾಂತಗಳನ್ನ ಆಲಿಸಿದ ಮೋದಿ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು.