ಮಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಕರಾವಳಿ ಉತ್ಸವ ನಡೆಯಲಿದೆ. ನಟ ಪ್ರಕಾಶ್ ರೈ ಇದರ ಉದ್ಘಾಟನೆ ಮಾಡುತ್ತಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಒಂದು ವರ್ಗದಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಮಂಗಳೂರು: ಮಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಕರಾವಳಿ ಉತ್ಸವ ನಡೆಯಲಿದೆ. ನಟ ಪ್ರಕಾಶ್ ರೈ ಇದರ ಉದ್ಘಾಟನೆ ಮಾಡುತ್ತಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಒಂದು ವರ್ಗದಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಸರ್ಕಾರದಿಂದ ನಡೆಯುವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಕಾಶ್ ರೈ ಆಗಮಿಸುತ್ತಿರುವುದರ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಫೇಸ್’ಬುಕ್ ಮತ್ತು ವಾಟ್ಸ್​ಪ್​’ಗಳಲ್ಲಿ ಪ್ರಕಾಶ್​ ರೈ ಫೋಟೋ ಪೋಸ್ಟ್​ ಮಾಡಿ, ಅವಾಚ್ಯ ಶಬ್ದಗಳಿಂದ ಕಮೆಂಟ್​ ಮಾಡಿದ್ದಾರೆ. 

ನಗರದ ಮಂಗಳಾ ಕ್ರೀಡಾಂಗಣ, ಕದ್ರಿ ಪಾರ್ಕ್ ಮತ್ತು ಬೀಚ್ ಗಳಲ್ಲಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಉತ್ಸವದ ಮೆರವಣಿಗೆಗೆ ಆಹಾರ ಸಚಿವ ಖಾದರ್ ಚಾಲನೆ ನೀಡಿ, ವಸ್ತು ಪ್ರದರ್ಶನಕ್ಕೆ ಸಚಿವ ರಮಾನಾಥ್ ರೈ ಚಾಲನೆ ನೀಡಿದ ಬಳಿಕ ಸಂಜೆ 6ಕ್ಕೆ ಪ್ರಕಾಶ್ ರೈ ಕರಾವಳಿ ಉತ್ಸವ ಉದ್ಘಾಟಿಸಲಿದ್ದಾರೆ.

ಆದರೆ ಇದೀಗ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ ಪ್ರಕಾಶ ರೈ ಸರ್ಕಾರದ ಕಾರ್ಯಕ್ರಮ ಉದ್ಘಾಟಿಸಬಾರದು ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ.