ಕರ್ನೂಲ್(ಜೂ.28): ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಯ್ಲಾಕುಂಟ್ಲ ಪಟ್ಟಣದ ಕುಡುಕ ಆಟೋ ಚಾಲಕನೋರ್ವ ತನ್ನ ಪತ್ನಿ, ಐವರು ಹೆಣ್ಣು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನು ಕೇವಲ 6.5 ಲಕ್ಷ ರೂ. ಗೆ ಮಾರಾಟ ಮಾಡಿದ್ದಾನೆ. ಒಟ್ಟು ೧೫ ಲಕ್ಷ ರೂ. ಸಾಲ ಹೊಂದಿದ್ದ ಪಸುಪುಲೆಟ್ಟಿ ಮ್ಯಾಡಿಲೆಟಿ ಎಂಬ ಪಾಪಿ, ತನ್ನ ಇಡೀ ಕುಟುಂಬವನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.

ಈತನ ಪತ್ನಿ ವೆಂಕಟಮ್ಮ  ನಾಂದ್ಯಾಲ್ ನಲ್ಲಿ  ಜಿಲ್ಲಾ ಮಕ್ಕಳ ಅಭಿವೃದ್ದಿ ಮತ್ತು ರಕ್ಷಣಾ ತಂಡದ ಅಧಿಕಾರಿಗಳನ್ನು ನಿನ್ನೆ ಸಂಪರ್ಕಿಸಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಜೂಜಾಟ ಮತ್ತು ಕುಡಿತಕ್ಕೆ ದಾಸನಾಗಿದ್ದ ಪಸುಪುಲೆಟ್ಟಿ ಮ್ಯಾಡಿಲೆಟಿ , ತನ್ನ 10 ವರ್ಷ ವಯಸ್ಸಿನ ಮಗಳನ್ನು ಪ್ರೌಢವಸ್ಥೆಗೆ ಬಂದಾಗ ಮದುವೆ ಮಾಡಿಸುವುದಾಗಿ ಭರವಸೆ ನೀಡಿ 1.5 ಲಕ್ಷ ರೂ. ಗೆ ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ.

ಮಗಳ ಮಾರಾಟದಿಂದ ಬಂದ ಹಣವೆಲ್ಲಾ ಖರ್ಚಾದ ಬಳಿಕ ಆತನ ಹೆಂಡತಿ ಹಾಗೂ ನಾಲ್ಕು ಮಕ್ಕಳನ್ನು 5 ಲಕ್ಷ ರೂ. ಗೆ ತನ್ನ ಸಹೋದರರಿಗೆ ಮಾರಾಟ ಮಾಡಿದ್ದಾನೆ. ಮ್ಯಾಡಿಲೆಟಿ, ಕುಡಿತ ಹಾಗೂ ಜೂಜಾಟ ಆರಂಭಿಸುವ ಹಿಂದೆ ಮೂರು ವರ್ಷ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ.  ಔಪಾಚಾರಿಕ  ಒಪ್ಪಂದದ ಬಗ್ಗೆ  ಪತ್ನಿ ವೆಂಕಟಮ್ಮನನ್ನು ಕೋರಿದ್ದಾಗ  ಆತ ತನ್ನ ಹೆಂಡತಿ  ಹಾಗೂ ಮಕ್ಕಳನ್ನು   ಸಹೋದರನಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಮಕ್ಕಳ ಅಭಿವೃದ್ದಿ ಮತ್ತು ರಕ್ಷಣಾ ಅಧಿಕಾರಿ ಟಿ. ಶಾರಾದಾ ತಿಳಿಸಿದ್ದಾರೆ.

ಗಂಡನ ಕಿರುಕುಳ ಸಹಿಸಲು ಆಗದಿದ್ದಾಗ ವೆಂಕಟ್ಟಮ್ಮ ತನ್ನ ಮಕ್ಕಳೊಂದಿಗೆ ನಾಂದ್ಯಾಲ್ ನಲ್ಲಿರುವ  ಪೋಷಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಳಿಕ ಒಂದು ತಿಂಗಳ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಗ ತನ್ನ ಹೆಣ್ಣುಮಕ್ಕಳಿಗೆ ಅಲ್ಲಾಗಡದಲ್ಲಿರುವ ಜಯ್  ಮನೆಗೆ ಸೇರಿಸಿಕೊಳ್ಳುವಂತೆ  ಜಿಲ್ಲಾ ಮಕ್ಕಳ ಅಭಿವೃದ್ದಿ ಹಾಗೂ ರಕ್ಷಣಾ ಅಧಿಕಾರಿಗಳನ್ನು ವೆಂಕಟಮ್ಮ ಮನವಿ ಮಾಡಿಕೊಂಡಿದ್ದಾರೆ.