ಕೇಂದ್ರ ಮಾಜಿ ಸಚಿವ, ದಿವಂಗತ ಅನಂತ ಕುಮಾರ್‌ ಅವರ ಪುತ್ಥಳಿಯನ್ನು ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್‌ನಲ್ಲಿ ಆನಾವರಣಗೊಳಿಸಲಾಗಿದೆ.

ಬೊಮ್ಮನಹಳ್ಳಿ: ಕೇಂದ್ರ ಮಾಜಿ ಸಚಿವ, ದಿವಂಗತ ಅನಂತ ಕುಮಾರ್‌ ಅವರ ಸಾಧನೆಗಳು ಚಿರಸ್ಥಾಯಿಯಾಗಿದ್ದು, ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದೆ ಎಂದು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್‌ ರೆಡ್ಡಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್‌ನಲ್ಲಿ ದಿವಂಗತ ಅನಂತ ಕುಮಾರ್‌ ಪುತ್ಥಳಿ ಆನಾವರಣಗೊಳಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಆಗುವ ಕೆಲಸಗಳು ಎಷ್ಟೇ ಕಷ್ಟವಾಗಿದ್ದರೂ ತಮ್ಮ ನೈಪುಣ್ಯತೆ ಹಾಗೂ ಸ್ವಸಾಮರ್ಥ್ಯದಿಂದ ಮಾಡಿಸುತ್ತಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರನಟ ಅಂಬರೀಷ್‌ ಅವರಿಗೂ ನುಡಿನಮನ ಸಲ್ಲಿಸಲಾಯಿತು. ರಕ್ತದಾನ ಹಾಗೂ ಗಿಡಗಳ ವಿತರಿಸಲಾಯಿತು. ಪಾಲಿಕೆ ಸದಸ್ಯೆ ಭಾರತಿ ರಾಮಚಂದ್ರ, ಬಿಜೆಪಿ ಮುಖಂಡ ಮುನಿರಾಂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ರಾಮಚಂದ್ರ, ಎಂ.ಚೇತನ್‌, ಸುನೀಲ್‌ ಇತರರಿದ್ದರು.