ಶಾಸಕರು ಸತ್ತು ಹೋಗಿದ್ದಾರ ಎಂದ ಅನಂತ್ ಕುಮಾರ್ ಹೆಗ್ಡೆ

Ananth Kumar Hegde Harsh Reaction With Women
Highlights

ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಬಳಿ ನಿಮ್ಮ ಶಾಸಕರೇನು ಸತ್ತು ಹೋಗಿದ್ದಾರಾ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೇಳಿದ ಘಟನೆ ಬನವಾಸಿಯಲ್ಲಿ ನಡೆದಿದೆ. 

ಶಿರಸಿ: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಗೆ ನಿಮ್ಮ ಶಾಸಕರೇನು ಸತ್ತು ಹೋಗಿದ್ದಾರಾ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೇಳಿದ ಘಟನೆ ಬನವಾಸಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ಹೆಗಡೆ ಅವರು ಹೋಗುತ್ತಿದ್ದಾಗ ಮಹಿಳೆಯೊಬ್ಬರು ಎದುರಾಗಿ, ಬನವಾಸಿಯ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು  ಬೇಕಾಗಿದ್ದಾರೆ. 

ಸಾವಿರಾರು ಗ್ರಾಮಸ್ಥರಿಗೆ ಅನುಕೂಲವಾಗಲಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವೈದ್ಯರನ್ನು ನೇಮಕ ಮಾಡಿ ಎಂದು ಒತ್ತಾಯಿಸಿದರು.  ಇದಕ್ಕೆ ಪ್ರತಿಕ್ರಿಯೆ ನೀಡಿದ ಅನಂತಕುಮಾರ ಹೆಗಡೆ ಅವರು, ನಿಮ್ಮ ಶಾಸಕರೇನು ಸತ್ತೋಗಿದ್ದಾರಾ? ಎಂದು ಕೇಳಿದರು.

ನಮಗೆ ನೀವೇ ಶಾಸಕರೆಂದು ನಕ್ಕ ಮಹಿಳೆಗೆ, ಹಾಗಿದ್ದರೆ ಸರಿ ಬಿಡಿ ಎಂದು ಸಚಿವರು ಅಲ್ಲಿಂದ ತೆರಳಿದರು. ಬನವಾಸಿಯು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಶಿವರಾಮ್ ಹೆಬ್ಬಾರ್ ಶಾಸಕರಾಗಿದ್ದಾರೆ.

loader