Asianet Suvarna News Asianet Suvarna News

ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ! ಅನಂತ್ ಕುಮಾರ್ ಹೆಗಡೆ ಎಚ್ಚರಿಕೆ

ಶಿರಸಿ ಬಂದ್, ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಲಾಗಿದ್ದ  62 ಮಂದಿ ಬಿಡುಗಡೆ ಆಗುತ್ತಿದ್ದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಫೇಸ್‌ಬುಕ್‌ನಲ್ಲಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಮುಂದಿದೆ ಇನ್ನೂ ದೊಡ್ಡ ಶಿರಸಿಯ ಮಾರಿಕಾಂಬಾ ಹಬ್ಬ ಎಂದು ಎಚ್ಚರಿಕೆ ನೀಡಿದ್ದಾರೆ.

Ananth kumar Hegde Challenges to CM Siddharamaiah

ಬೆಂಗಳೂರು (ಡಿ.15): ಶಿರಸಿ ಬಂದ್, ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಲಾಗಿದ್ದ  62 ಮಂದಿ ಬಿಡುಗಡೆ ಆಗುತ್ತಿದ್ದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಫೇಸ್‌ಬುಕ್‌ನಲ್ಲಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಮುಂದಿದೆ ಇನ್ನೂ ದೊಡ್ಡ ಶಿರಸಿಯ ಮಾರಿಕಾಂಬಾ ಹಬ್ಬ ಎಂದು ಎಚ್ಚರಿಕೆ ನೀಡಿದ್ದಾರೆ.

ಗೃಹ ಸಚಿವರು, ಸಲಹೆಗಾರರಾದ ಕೆಂಪಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ಸಚಿವರು, ದೇಶದೊಳಗೆ ಇರುವ ವಿದ್ರೋಹಿಗಳಿಗೆ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ ಎಂದು ನೇರವಾಗಿ ಹೇಳಿದ್ದಾರೆ.

ಅವರ ಫೇಸಬುಕ್ ಪೋಸ್ಟ್ ಹೀಗಿದೆ:

"ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ!! ನಿಂಬಾಳ್ಕರ್, ರಾಮ ಲಿಂಗಾರೆಡ್ಡಿ ಹಾಗೂ ಕೆಂಪಯ್ಯನಂತಹ ಜನರಿದ್ದರೆ ಮುಂದಿದೆ ನೋಡಿ ಇನ್ನು ದೊಡ್ಡ ಶಿರಸಿಯ ಮಾರಿಕಾಂಬಾ ಹಬ್ಬ! ಶಿರಸಿಯಲ್ಲಿ ಮೊನ್ನೆಯ ದಿನ ಪೊಲೀಸ್ ಪ್ರೇರಿತ ಗಲಭೆಯಲ್ಲಿ ಬಂಧಿತರಾಗಿದ್ದ 62  ಮಂದಿ ಮುಗ್ಧರನ್ನು ಶಿರಸಿ ನ್ಯಾಯಾಲಯ ಇಂದು ಜಾಮೀನು ಪಡೆದು ಬಿಡುಗಡೆಗೆ ಆದೇಶಿಸಿದೆ. ಕೇವಲ ಒಂದೂವರೆ ದಿನದಲ್ಲಿ ಬಿಡುಗಡೆ ಆದೇಶ ಪಡೆದ ಕ್ರಮವು ಐತಿಹಾಸಿಕವಾಗಿದ್ದು, ಈ ತೀರ್ಪು ಪೊಲೀಸ್ ಸಮವಸ್ತ್ರದಲ್ಲಿ ದಾದಾಗಿರಿ ಮಾಡಲು ಹೊರಟಿದ್ದ ನಿಂಬಾಳ್ಕರ್ ಎಂಬ ಹುಂಬ ಅಧಿಕಾರಿಗೆ ತೀವ್ರವಾದ ಕಪಾಳ ಮೋಕ್ಷವಾಗಿದೆ. ಸೆಕ್ಷನ್ 307  ಅನ್ನು ಮನಬಂದಂತೆ ಜರುಗಿಸಿ ವಿಕೃತ ಪಭುತ್ವ ಸಾಧಿಸಲು ಹೊರಟರೆ, ಈ ದೇಶದ ಕಾನೂನು ಸುಮ್ಮನೆ ಕೂರುವುದಿಲ್ಲ ಎಂದು ಇಂದಿನ ನ್ಯಾಯಾಲಯದ ತೀರ್ಮಾನ ಸ್ಪಷ್ಟವಾಗಿ ತಿಳಿಸಿದೆ.

ಇದು ಪ್ರಜಾಪ್ರಭುತ್ವದ ವಿಜಯ!: ಸಿದ್ಧರಾಮಯ್ಯ ನವರೇ ನಿಮ್ಮ ಮುಖವನ್ನು ಮತ್ತೊಮ್ಮೆ ಕನ್ನಡಿ ಮುಂದೆ ನೋಡಿಕೊಳ್ಳಿ! ನಿಮ್ಮ ಒಡ್ಡೋಲಗದ ಸಹೋದ್ಯೋಗಿಗಳು ಸಹ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗುವ ದಿನ ದೂರವಿಲ್ಲ. ವಿದ್ರೋಹಿಗಳ ಬೆಂಬಲಕ್ಕೆ ನಿಂತು ದೇಶಭಕ್ತರನ್ನು ಸದೆಬಡಿಯುವ ನಿಮ್ಮ ಯೋಜನೆಗೆ, ನಿಮ್ಮ ಅಮೂಲ್ಯ ಸಲಹೆಗಾರ ನಾಗಲಿ ಅಥವಾ ನಾಲಾಯಕ್ ಗೃಹ ಮಂತ್ರಿಯಾಗಲಿ ಇನ್ನೇನು ತಾನೇ ಕಿಸಿಯಲು ಸಾಧ್ಯ? ನಮ್ಮ ಹೋರಾ ಟಕ್ಕೆ ಇಂದಿನ ಈ ತೀರ್ಪು ಬಹು ದೊಡ್ಡ ನೈತಿಕ ಬೆಂಬಲ ನೀಡಿ ಹೋರಾ ಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದ್ದು ಕೋಮುವಾದಿ, ಜಾತಿ ವಾದಿ ಹುಂಬ ಸರ್ಕಾರವಲ್ಲದೆ, ದೇಶದೊಳಗೆ ಇರುವ ವಿದ್ರೋಹಿಗಳಿಗೆ ಸಹ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ. ಹುಂಬ ಧೈರ್ಯವಿದ್ದರೆ ಎದುರಿಸಲಿ! ನ್ಯಾಯಾಲಯದಲ್ಲಿ ನಮ್ಮ ದೇಶಭಕ್ತರ ಪರವಾಗಿ ವಾದಿಸಿ ನ್ಯಾಯ ದೊರೆಕಿಸಿಕೊಟ್ಟ ಅಷ್ಟು ವಕೀಲ- ವೃಂದದವರಿಗೆ ನನ್ನ ಬಹುದೊಡ್ಡ ಧನ್ಯವಾದಗಳು" ಎಂದು ಅನಂತ್ ಕುಮಾರ್ ಹೆಗಡೆ ಬರೆದುಕೊಂಡಿದ್ದಾರೆ

 

 

Follow Us:
Download App:
  • android
  • ios