ಸಿಎಂ ಸಿದ್ದರಾಮಯ್ಯ ಕುಂಬಕರ್ಣನ ವಂಶದವರು : ಅನಂತ್ ಕುಮಾರ್ ಹೆಗಡೆ

First Published 17, Jan 2018, 1:19 PM IST
Ananth Kumar Hegde Attack CM
Highlights

ಕುಂಬಕರ್ಣ ಬೇಜಾರಾಗಿದ್ದಾರೆ ಎಂದು ನನಗೆ ಶ್ರೀಲಂಕಾದಿಂದ ವಾಟ್ಸಾಪ್ ಬಂದಿದೆ. ಸಿದ್ದರಾಮಯ್ಯ ಯಾವಾಗಿದ್ದರೂ ಕೂಡ ನಮ್ಮ ವಂಶದವರು ಎಂದಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಬೆಂಗಳೂರು (ಜ.17): ಕುಂಬಕರ್ಣ ಬೇಜಾರಾಗಿದ್ದಾರೆ ಎಂದು ನನಗೆ ಶ್ರೀಲಂಕಾದಿಂದ ವಾಟ್ಸಾಪ್ ಬಂದಿದೆ. ಸಿದ್ದರಾಮಯ್ಯ ಯಾವಾಗಿದ್ದರೂ ಕೂಡ ನಮ್ಮ ವಂಶದವರು ಎಂದಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ನಾಲ್ಕು ವರ್ಷದ ನಂತರ ಸಿದ್ದರಾಮಯ್ಯಗೆ ಕನಸು ಬೀಳುತ್ತಿದೆ ಅಂದರೆ ಗಡದ್ ನಿದ್ದೆ ಮಾಡುತ್ತಿದ್ದಾರೆ.  ಈ ರೀತಿ ನಿದ್ದೆ ಮಾಡುವ ಸಿದ್ದರಾಮಯ್ಯ ಬೇಕಾ, ಅಥವಾ ಉತ್ತಮ ಆಡಳಿತವನ್ನು ನೀಡುವ ಯಡಿಯೂರಪ್ಪ ನಿಮಗೆ ಬೇಕಾ ಎಂದು ನೀವೇ ತೀರ್ಮಾನ ಮಾಡಿ.

ರಾಜ್ಯದ 224 ಕ್ಷೇತ್ರಗಳಿಗೆ ಯಾರಾದರೂ ಹೋಗಿದ್ದಾರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ  ಕುಮಾರಸ್ವಾಮಿಗೆ ಪಂಕ್ಚರ್ ಆಗಿದೆ. ಹೋಗೋಕೆ ಆಗಲ್ಲ. ಸಿಎಂ-ಪರಂ ನಡುವೆ ಜಗಳವಾಗಿದೆ. ಹಾಗಾಗಿ ತರಲೆ ತಂಟೆ ಇಲ್ಲದ ಯಡಿಯೂರಪ್ಪ ಅವರು ಮೋದಿ ವೇಗದಲ್ಲಿ ಹೋಗುತ್ತಿದ್ದಾರೆ. ಮುಂದಿನ ತಿಂಗಳು ನಾಲ್ಕನೇ ತಾರೀಕು ಪ್ರಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಹಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕರ್ತರ ಬೆವರಿನ ಹನಿಯಾಗಿದೆ ಎಂದು ಹೇಳಿದ್ದಾರೆ.

loader