ಗದಗ [ಜು.1] :  ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರ ನನಗೆ ಹೆಚ್ಚು ಅಚ್ಚರಿಯನ್ನುಂಟು ಮಾಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ. 

ಗದಗ್ ನಲ್ಲಿ ಮಾತನಾಡಿದ ಎಚ್. ಕೆ. ಪಾಟೀಲ್, ಆನಂದ್ ನಮ್ಮ ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಸೇರಿದ್ದರು. ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ರಾಜೀನಾಮೆ ವಿಚಾರ ಸುಳ್ಳು ಎನಿಸುತ್ತಿದೆ ಎಂದರು. 

ಇನ್ನೂ 9 ಶಾಸಕರು ರಾಜೀನಾಮೆ‌ ನೀಡಲಿದ್ದಾರೆ ಎನ್ನುವ ವಿಚಾರವಾಗಿಯೂ ಮಾತನಾಡಿದ ಅವರು ಇದೆಲ್ಲವೂ ಕೂಡ ಊಹಾಪೋಹ. ಇದರಲ್ಲಿ ಯಾವುದೇ ಸತ್ಯವಿಲ್ಲ.  ಇದು ರಾಜ್ಯದ ಅಭಿವೃದ್ಧಿಗೆ ಹಿತಕಾರಿಯೂ ಅಲ್ಲ. ಇಂತಹ ಸುದ್ದಿಗಳನ್ನು ಹಬ್ಬಿಸುವುದು ಜನದ್ರೋಹಿ ಕೆಲಸ ಎಂದರು. 

ಬಿಜೆಪಿಯ ಸರ್ಕಾರ ಕೆಡವುವ ಪ್ರಯತ್ನವನ್ನು ನಿರಂತರವಾಗಿ ಮಾಡುತಿದ್ದು, ರಾಜಕಾರಣವನ್ನು ಡೋಲಾಯಮಾನಗೊಳಿಸುವ ಯತ್ನ ನಡೆಸುತ್ತಿದೆ. ಅಭಿವೃದ್ಧಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕೋದೇ ದುರ್ದೈವದ ಸಂಗತಿ. ನಿರಂತರವಾಗಿ ಸರ್ಕಾರ ಬೀಳಿಸುವ ತಂತ್ರ ನಡೆಸುತಿದ್ದು, ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರು ಈ ಕೆಲಸದಲ್ಲಿ ಯಶಸ್ವಿಯಾಗುವುದಿಲ್ಲ ಎಂದರು.