ನೆರೆ ಸಂತ್ರಸ್ತರಿಗೆ ಬೋಟ್ ಏರಲು ಮೆಟ್ಟಿಲಾದ ವ್ಯಕ್ತಿಗೆ ಕಾರ್ ಗಿಫ್ಟ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 11:15 AM IST
Anand Mahindra Gift Marazzo Car To FisherMan
Highlights

ಕೇರಳದಲ್ಲಿ ಭಾರೀ ಮಳೆ ಸುರಿದು ಜನಜೀವನ ತತ್ತರಿಸಿದ್ದ ವೇಳೆ ತನ್ನ ಜೀವದ ಹಂಗು ತೊರೆದು ಕಾರ್ಯನಿರ್ಹಿಸಿದ್ದ ಮೀನುಗಾರರೋರ್ವರಿಗೆ ಇದೀಗ ಬಂಪರ್ ಗಿಫ್ಟ್ ನೀಡಲಾಗಿದೆ. 

ಕಲ್ಲಿಕೋಟೆ: ಕೇರಳದಲ್ಲಿ ಇತ್ತೀಚೆಗೆ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ವೇಳೆ ಇಲ್ಲಿನ ಜನತೆ ತತ್ತರಿಸಿದ್ದು , ಅನೇಕರು ಸ್ವಯಂ ಪ್ರೇರಿತವಾಗಿ ಜನರ ನೆರವಿಗೆ ನಿಂತಿದ್ದರು. ಅಂತವರಲ್ಲಿ ಮೀನುಗಾರರೋರ್ವರು ಕೂಡ ತಮ್ಮ ಪ್ರಾಣದ ಹಂಗನ್ನೇ ತೊರೆದು ಪ್ರವಾಹ ಪೀಡಿತರ ರಕ್ಷಣೆಯಲ್ಲಿ ತೊಡಗಿದ್ದರು. 

ಅವರಿಗೆ ಇದೀಗ ಬಂಪರ್ ಗಿಫ್ಟ್ ಒಂದು ಲಭ್ಯವಾಗಿದೆ.   ಮಹಿಳೆಯರು, ವೃದ್ಧರಿಗೆ ಬೋಟ್ ಏರಲು ತನ್ನ ಬೆನ್ನನ್ನೇ ಮೆಟ್ಟಿಲು ರೀತಿ ಮಾಡಿ ನೆರವಾಗಿದ್ದ ಮಲಪ್ಪುರಂನ ಜೈಸಲ್ ಎಂಬ ಮೀನುಗಾರನಿಗೆ ಮಹೀಂದ್ರಾ ಕಂಪನಿ ಕಾರನ್ನು ಉಡುಗೊರೆಯಾಗಿ ನೀಡಿದೆ. 

 ಇತ್ತೀಚೆಗಷ್ಟೇ ಬಿಡುಗಡೆಯಾದ ಮರಾಜೋ ಕಾರನ್ನು ಉಡುಗೊರೆಯಾಗಿ ನೀಡಿದೆ.

loader