ಚಿತ್ತಾರದ ಚಲುವೆಗೆ ಅಮೂಲ್ಯ ಕೊಡುಗೆ ನೀಡಿದ ಪತಿ
ಸ್ಯಾಂಡಲ್'ವುಡ್'ನ ಗೋಲ್ಡನ್ ಕ್ವೀನ್ ಅಮೂಲ್ಯ ಮದುವೆ ನಂತರ ಇತ್ತೀಚೆಗೆ ಪತಿ ಜಗದೀಶ್ ಜೊತೆ ತಮ್ಮ ಮೊದಲ ಹುಟ್ಟು ಹಬ್ಬವನ್ನ ಆಚರಿಸಿಕೊಂಡ್ರು. ಈ ವರ್ಷದ ಬರ್ತ್ಡೇ ಗಿಫ್ಟ್ ಅಂತಾ ಪತಿ ಜಗದೀಶ್ ಅವರು ಅಮೂಲ್ಯ ಅವರಿಗೆ 40 ಲಕ್ಷ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾಸ್ಟ್ಲಿ ಕಾರಿನಲ್ಲಿ ಪತಿ ಜಗದೀಶ್ ಪತ್ನಿ ಜೊತೆ ನಗರದಲ್ಲಿ ಒಂದು ಸುತ್ತು ಹಾಕಿ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

