ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆ ಇಂದಿರಾ ಕ್ಯಾಂಟಿನ್ ನನ್ನು ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ, ಮಾತನಾಡುತ್ತಾ, ಪ್ರತಿಯೊಬ್ಬ ಬಡವನೂ ತಾನು ಸಿದ್ದರಾಮಯ್ಯ ಸರ್ಕಾರವಿರುವ ಕರ್ನಾಟಕದಲ್ಲಿದ್ದೇನೆ ಎಂದು ಭಾವಿಸಿಕೊಳ್ಳಬೇಕು. ಬಡವರ ಹಸಿವನ್ನು ನೀಗಿಸುವುದೇ ನಮ್ಮ” ಅಮ್ಮಾ ಕ್ಯಾಂಟಿನ್ ಆಆಅ.... ಇಂದಿರಾ ಕ್ಯಾಂಟೀನ್’ನ ಆಶಯವಾಗಿದೆ ಎಂದು ರಾಹುಲ್ ಗಾಂಧಿ ಬಾಯಿ ತಪ್ಪಿ ಹೇಳಿದ್ದಾರೆ.
ಬೆಂಗಳೂರು (ಆ.16): ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆ ಇಂದಿರಾ ಕ್ಯಾಂಟಿನ್ ನನ್ನು ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ, ಮಾತನಾಡುತ್ತಾ, ಪ್ರತಿಯೊಬ್ಬ ಬಡವನೂ ತಾನು ಸಿದ್ದರಾಮಯ್ಯ ಸರ್ಕಾರವಿರುವ ಕರ್ನಾಟಕದಲ್ಲಿದ್ದೇನೆ ಎಂದು ಭಾವಿಸಿಕೊಳ್ಳಬೇಕು. ಬಡವರ ಹಸಿವನ್ನು ನೀಗಿಸುವುದೇ ನಮ್ಮ” ಅಮ್ಮಾ ಕ್ಯಾಂಟಿನ್ ಆಆಅ.... ಇಂದಿರಾ ಕ್ಯಾಂಟೀನ್’ನ ಆಶಯವಾಗಿದೆ ಎಂದು ರಾಹುಲ್ ಗಾಂಧಿ ಬಾಯಿ ತಪ್ಪಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಆರಂಭವಾಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ಬಡವರ. ಶ್ರಮಿಕರ ಹಸಿವನ್ನು ನೀಗಿಸುವ ಉದ್ದೇಶವನ್ನು ಹೊಂದಿದೆ. ನೆರೆಯ ರಾಜ್ಯ ತಮಿಳು ನಾಡಿನ ಅಮ್ಮಾ ಕ್ಯಾಂಟೀನ್ ಯೋಜನೆಯನ್ನೇ ನಕಲು ಮಾಡಲಾಗಿದೆ ಎಂದು ಕೆಲವರು ಟೀಕಿಸುತ್ತಾರೆ/ ಜನಪರ ಯೋಜನೆಗಳನ್ನು ನಾವು ಜಾರಿಗೆ ತರುವಲ್ಲಿ ತಪ್ಪೇನಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿರಾ ಗಾಂಧಿ ಕ್ಯಾಂಟಿನ್’ನಲ್ಲಿ ಶುಚಿತ್ವವನ್ನು ಕಾಪಾಡಿದ್ದು, ಉತ್ತಮ ಗುಣಮಟ್ಟದ ಟವನ್ನು ನೀಡಲಾಗುತ್ತದೆ. ನಾನು ಊಟ ಮಾಡಿದ್ದೇನೆ. ಯಾವ ಫೈವ್ ಸ್ಟಾರ್ ಹೋಟೆಲ್’ಗೂ ಕಮ್ಮಿಯಿಲ್ಲ ಎಂದಿದ್ದಾರೆ.
