ಕುವೆಂಪು ಸಾಹಿತ್ಯ ಓದಿ, ಚಿಂತನೆ ಬೆಳಸಿಕೊಳ್ಳಿ : ಸಿದ್ದರಾಮಯ್ಯಗೆ ಶಾ ಸಲಹೆ

Amith Shah Slams Siddaramaiah at Shivamogga
Highlights

8000,4000 ಮೆಟ್ರಿಕ್ ಟನ್ ಅಡಿಕೆಗೆ ಈ ಮೊದಲು ಖರೀದಿಯಾಗಿತ್ತಿತ್ತು. ಆದರೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಮೆಟ್ರಿಕ್ ಟನ್'ಗೆ 40 ಸಾವಿರ ರೂಗೆ ಖರೀದಿಸಲಾಗುವುದು ಎಂದರು

ತೀರ್ಥಹಳ್ಳಿ(ಮಾ.26): ಸಿಎಂ ಸಿದ್ದರಾಮಯ್ಯ ಅವರು ಸಮಾಜ ಒಡೆಯುವ ಕೆಲಸ ಬೇಡ ಕುವೆಂಪು ಅವರ ಸಾಹಿತ್ಯ ಓದಿ ಚಿಂತನೆಯನ್ನ ಬೆಳೆಸಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಅಡಿಕೆ ಬೆಳಗಾರರ ಬಗ್ಗೆ ಪ್ರಸ್ತಾಪಿಸಿದರು. ಟ್ರಿಮ್ಸ್ ಟ್ರಪ್ಸ್ ವ್ಯಾಟ್ ಒಪ್ಪಂದವಾದಾಗ ರೈತನ ಬೆಳೆಗೆ ಹೊಡೆತಬಿತ್ತು. ಯುಪಿಎ ರೈತರ ಬೆಳೆಗೆ ಪ್ರಮುಖ್ಯತೆ ನೀಡಲಿಲ್ಲ. ಆದರೆ ಪ್ರಧಾನ ಮೋದಿ ರೈತರ ಬೆಳೆಗೆ ಉತ್ತಮ ಬೆಲೆ ನೀಡಲು ಶ್ರಮಿಸಿದ್ದಾರೆ.

ಸಹಕಾರ ಸಂಘದ ಮೂಲಕ ಅಡಿಕೆಗೆ ಬೆಂಬಲ ಬೆಲೆ ಘೋಷಿಸಲು ಪ್ರಧಾನಿ ಮೋದಿ ಶ್ರಮಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಸಹಕರಿಸಲಿಲ್ಲ. 8000,4000 ಮೆಟ್ರಿಕ್ ಟನ್ ಅಡಿಕೆಗೆ ಈ ಮೊದಲು ಖರೀದಿಯಾಗಿತ್ತಿತ್ತು. ಆದರೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಮೆಟ್ರಿಕ್ ಟನ್'ಗೆ 40 ಸಾವಿರ ರೂಗೆ ಖರೀದಿಸಲಾಗುವುದು ಎಂದರು.

ಗುಟ್ಕಾ ಮತ್ತು ಅಡಿಕೆ ಬೇರೆ ಬೇರೆ, ಗುಟ್ಕಾದಲ್ಲಿ ತಂಬಾಕು ಬೆರೆಸಲಾಗುವುದು ಎಂದು ಹೇಳಿ ಕೇಂದ್ರ ಆಗಿನ ಪ್ರಧಾನಿ ನರಸಿಂಹ ರಾವ್ ಸುಪ್ರೀಂ ಕೋರ್ಟ್ ಗೆ ಅಫಿಡೆವಿಟ್ ಹಾಕಿತ್ತು. ಇದರಿಂದಾಗಿ ಗುಟ್ಕಾದ ಜೊತೆ ಅಡಿಕೆನೂ ನಿಷೇಧಕ್ಕೆ ಒಳಗಾಗಿದೆ.

ಭಾರತದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಹೇಳಿಕೊಂಡು ಸಿಎಂ ಸಿದ್ದರಾಮಯ್ಯ ಹೇಳಿತ್ತಿದ್ದಾರೆ. ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಸುರಕ್ಷತೆಯಲ್ಲಿ ಯಾವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್. ಸಿದ್ದರಾಮಯ್ಯ ಅವರ ವಾಚ್ ಒಂದೇ ಅವರ ಭ್ರಷ್ಠಾಚಾರದ ಬಗ್ಗೆ ತಿಳಿಸುತ್ತದೆ. ಸಮಾಜವಾದಿ ಹಿನ್ನಲೆಯಿಂದ ಬಂದ ನೀವು 40ಲಕ್ಷ ರೂ ಮೌಲ್ಯದ ವಾಚ್ ನೀವು ಕಟ್ಟಿದರೆ ನೀವು ಭ್ರಷ್ಟರೆನ್ನಬೇಕಾ ಬೇಡವೇ ಎಂದು ಜನಗಳಿಗೆ ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್'ವೈ, ಸಂಸದ ಪ್ರಹ್ಲಾದ ಜೋಷಿ, ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಮುರುಳೀಧರ್ ರಾವ್, ಶಾಸಕ ಜೀವರಾಜ್, ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲ ಕೃಷ್ಣ, ಕುಮಾರ್ ಬಂಗಾರಪ್ಪ ಮೊದಲಾದವರು ಉಪಸ್ಥಿತರಿದ್ದರು.

loader