ಪ್ರಮೋದಾ ದೇವಿ ಭೇಟಿ ಮಾಡಲಿರುವ ಅಮಿತ್ ಶಾ

First Published 27, Mar 2018, 10:57 AM IST
Amith Shah Meet Pramoda devi
Highlights

ಇದೇ ತಿಂಗಳ ಅಂತ್ಯದಲ್ಲಿ ಮೈಸೂರಿಗೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಒಡೆಯರ್ ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಅವರನ್ನು ಭೇಟಿ ಮಾಡಲಿದ್ದಾರೆ.

ಬೆಂಗಳೂರು: ಇದೇ ತಿಂಗಳ ಅಂತ್ಯದಲ್ಲಿ ಮೈಸೂರಿಗೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಒಡೆಯರ್ ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಅವರನ್ನು ಭೇಟಿ ಮಾಡಲಿದ್ದಾರೆ.

ಇದೊಂದು ಸೌಜನ್ಯಯುತ ಭೇಟಿ ಆಗಿರಲಿದೆ. ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ವಾಸ್ತವವಾಗಿ ಪ್ರಮೋದಾದೇವಿ ಹಾಗೂ ಯುವರಾಜ ಯದುವೀರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ.

ಆದರೆ, ಇದುವರೆಗೆ ಪ್ರಮೋದಾದೇವಿ ಅವರಾಗಲೀ ಯದುವೀರ್ ಅವರಾಗಲೀ ಗುಟ್ಟು ಬಿಟ್ಟುಕೊಟ್ಟಿಲ್ಲ.

loader