ಹಲ್ಲೆ ನಡೆಸಿವರನ್ನೂ ಓಲೈಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಸರ್ಕಾರ : ಅಮಿತ್ ಶಾ

First Published 20, Feb 2018, 11:53 AM IST
Amith Shah in Mangaluru News
Highlights

ಇಂದಿನಿಂದ ಮೂರು ದಿನಗಳ ಕಾಲ ಮಂಗಳೂರು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಕಾರ್ಯಕರ್ತರನ್ನುದ್ದೇಶಿ ಭಾಷಣ ಮಾಡಿದ್ದಾರೆ.

ಮಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಮಂಗಳೂರು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಕಾರ್ಯಕರ್ತರನ್ನುದ್ದೇಶಿ ಭಾಷಣ ಮಾಡಿದ್ದಾರೆ. ನವಶಕ್ತಿ ಸಮಾವೇಶದ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರವೇ ಗೊತ್ತು ಎಂದು ಹೇಳಿದ್ದಾರೆ. ಬಿಜೆಪಿಯ ತಾಕತ್ತು ಈ ಸಮಾವೇಶದಿಂದ ಗೊತ್ತಾಗುತ್ತದೆ. ಒಂದು ಬೂತ್’ನಿಂದ 9 ಬೂತ್ ಮಟ್ಟದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಸಮಾವೇಶ ಮಾಡುತ್ತಿದ್ದೇವೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಕಾರ್ಯಕರ್ತರೇ ನಮ್ಮ ಶಕ್ತಿ. ಸುಳ್ಯದಲ್ಲಿ 1983ರಲ್ಲಿ ಬಿಜೆಪಿ ಸಂಘಟನೆಯ ಮೇಲೆ ಗೆದ್ದ ಕ್ಷೇತ್ರ ಎಂದು  ಹಿರಿಯ ನಾಯಕರು ನನಗೆ ಹೇಳಿದ್ದರು. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಶೇ.50ರಷ್ಟು ಮತಗಳಿಲ್ಲಿ ಶೆ.50ರಷ್ಟು ಮತಗಳನ್ನು ಬಿಜೆಪಿ ಇಲ್ಲಿ ಪಡೆಯುತ್ತಿದೆ. ಇದೇ ನಮ್ಮ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಚುನಾವಣೆ ರಾಜ್ಯಕ್ಕೆ ಮಾತ್ರ ಮಹತ್ವದ್ದಲ್ಲ. ಇದು ದೇಶಕ್ಕೆ ಮಹತ್ವದ ಚುನಾವಣೆ ಎಂದು ಹೇಳಿದ್ದಾರೆ. ಇಲ್ಲಿ ಗೆಲ್ಲುವ ಮೂಲಕ ಬಿಜೆಪಿ ದಕ್ಷಿಣದಲ್ಲಿ ಬಾಗಿಲನ್ನು ತೆರೆಯಲಿದೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಚುನಾವಣೆಯಲ್ಲಿಯೂ ಕೂಡ ನಾವು ಗೆಲ್ಲುತ್ತಿದ್ದೇವೆ.

ಕರ್ನಾಟಕದಲ್ಲಿಯೂ ಕೂಡ ಕಾಂಗ್ರೆಸ್ ಹೋಗುತ್ತೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ  ರಾಜಕೀಯ ಪಕ್ಷ ಎಂಬ ಹೆಮ್ಮೆ ಬಿಜೆಪಿಗಿದೆ ಎಂದು ಹೇಳಿದ್ದಾರೆ. 

ಹ್ಯಾರಿಸ್ ಪುತ್ರ ಪುಂಡಾಟಿಕೆ ಬಗ್ಗೆಯೂ ಕೂಡ ಅಮಿತ್ ಶಾ ಪ್ರಸ್ತಾಪ ಮಾಡಿದ್ದು, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದವರನ್ನೂ ಕೂಡ ಓಲೈಸಿಕೊಳ್ಳುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳೂ ಕೂಡ ಹೆಚ್ಚಿದೆ ಎಂದು ಹೇಳಿದ್ದಾರೆ.

loader