ಮಂಗಳೂರಿನಲ್ಲಿ ಇಂದಿನಿಂದ ಬಿಜೆಪಿ ಚಾಣಾಕ್ಯ ಅಮಿತ್ ‘ಶೋ’

First Published 20, Feb 2018, 10:40 AM IST
Amith Shah In Mangaluru
Highlights

ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಬಿಜೆಪಿ ಚಾಣಕ್ಯ ಅಮಿತ್ ಶಾ ಸಂಚಾರ ಆರಂಭಿಸಿದ್ದಾರೆ. ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ನಿಗದಿತ ಸಮಯಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬರಲಾಗಲಿಲ್ಲ.

ಮಂಗಳೂರು : ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಬಿಜೆಪಿ ಚಾಣಕ್ಯ ಅಮಿತ್ ಶಾ ಸಂಚಾರ ಆರಂಭಿಸಿದ್ದಾರೆ. ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ನಿಗದಿತ ಸಮಯಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬರಲಾಗಲಿಲ್ಲ.

ಆದರೆ ಗೆಸ್ಟ್ ಗೌಸ್’ನಲ್ಲಿ ಶಾಗೆ ಚಿಕಿತ್ಸೆ ನೀಡಲಾಗಿದ್ದು,  9 ಗಂಟೆ ಸುಮಾರಿಗೆ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಕರಾವಳಿಯನ್ನು  ಬಿಜೆಪಿ ವಶ ಮಾಡಿಕೊಳ್ಳಲು ಅಮಿತ್ ಶಾ ಮಾಸ್ಟರ್ ಪ್ಲಾನ್ ಹಾಕಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಬೂತ್​​ ಮಟ್ಟ ಮತ್ತು ಮುಖಂಡರ ಜೊತೆ ಶಾ ಚರ್ಚೆ ನಡೆಸಲಿದ್ದು, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಅಮಿತ್ ಶಾ ಸಂಚಾರ ನಡೆಸಲಿದ್ದಾರೆ.

loader