ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಂಗ್ರೆಸ್‌ಗೆ?

First Published 22, Feb 2018, 4:08 PM IST
Amitabh Bachchan starts following Cong leaders on Twitter triggers speculation
Highlights

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಅನೇಕ ಕಾಂಗ್ರೆಸ್ ನಾಯಕರನ್ನು ಟ್ವೀಟರ್‌ನಲ್ಲಿ ಫಾಲೋ ಮಾಡಲು ಆರಂಭಿಸಿದ್ದು, ಒಂದು ಕಾಲದಲ್ಲಿ ಹತ್ತಿರವಾಗಿದ್ದ ಕಾಂಗ್ರೆಸ್‌ಗೆ ಮತ್ತೆ ಸೇರ್ತಾರೆ ಎಂಬ ಊಹಾಪೂಹಗಳು ಗರಿಗೆದರಿಕೊಂಡಿದೆ.

ಹೊಸದಿಲ್ಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಅನೇಕ ಕಾಂಗ್ರೆಸ್ ನಾಯಕರನ್ನು ಟ್ವೀಟರ್‌ನಲ್ಲಿ ಫಾಲೋ ಮಾಡಲು ಆರಂಭಿಸಿದ್ದು, ಒಂದು ಕಾಲದಲ್ಲಿ ಹತ್ತಿರವಾಗಿದ್ದ ಕಾಂಗ್ರೆಸ್‌ಗೆ ಮತ್ತೆ ಸೇರ್ತಾರೆ ಎಂಬ ಊಹಾಪೂಹಗಳು ಗರಿಗೆದರಿಕೊಂಡಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಅಧಿಕೃತ ಪುಟವನ್ನು ಫಾಲೋ ಮಾಡಲು ಆರಂಭಿಸಿದ ಬಚ್ಚನ್, ಹಿರಿಯ ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ, ಪಿ.ಚಿದಂಬರಂ, ಕಪಿಲ್ ಸಿಬಲ್, ಅಹ್ಮದ್ ಪಟೇಲ್, ಅಶೋಕ್ ಗೆಹ್ಲೋಟ್, ಅಜಯ್ ಮಕೆನ್, ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್ ಮತ್ತು ಸಿಪಿ ಜೋಶಿಯವರನ್ನು ಇದೇ ತಿಂಗಳು ಫಾಲೋ ಮಾಡಲು ಆರಂಭಿಸಿದ್ದಾರೆ.

ನೆಹರು-ಗಾಂಧಿಗೆ ಒಂದು ಕಾಲದಲ್ಲಿ ಅಮಿತಾಬ್ ಆಪ್ತರಾಗಿದ್ದರು. ರಾಜೀವ್ ಗಾಂಧಿಗೆ ಅತ್ಯುತ್ತಮ ಸ್ನೇಹಿತರಾಗಿದ್ದರು. ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿರುವ ಗುಜರಾತಿಗೆ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಹಲವು ಬಿಜೆಪಿ ನಾಯಕರನ್ನೂ ಬಚ್ಚನ್ ಫಾಲೋ ಮಾಡುತ್ತಿದ್ದಾರೆ.

3.13 ಕೋಟಿ ಟ್ವೀಟರ್ ಫಾಲೋಯರ್ಸ್ ಇರುವ ಈ ಬಾಲಿವುಡ್‌ನ ಹಿರಿಯ ನಟ 1,730 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

 

loader