ಹಿಂಬಾಲಕರ ಸಂಖ್ಯೆ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಟ್ವಿಟರ್ ತೊರೆಯುವುದಾಗಿ ನಟ ಅಮಿತಾಭ್ ಬಚ್ಚನ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಹಿಂಬಾಲಕರ ಸಂಖ್ಯೆ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಟ್ವಿಟರ್ ತೊರೆಯುವುದಾಗಿ ನಟ ಅಮಿತಾಭ್ ಬಚ್ಚನ್ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಕಲಿ ಹಿಂಬಾಲಕರನ್ನು ಮಾರಾಟ ಮಾಡುವ ಕೆಲವು ಸಂಸ್ಥೆಗಳ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿದ ಬಳಿಕ ಕೆಲವು ಸೆಲೆಬ್ರಿಟಿಗಳ ಟ್ವಿಟರ್ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಬೆನ್ನಲ್ಲೇ ಬಚ್ಚನ್ ಹೇಳಿಕೆ ಹೊರಬಿದ್ದಿದೆ.

ಬಚ್ಚನ್ ಕೂಡ ಹಿಂಬಾಲಕರ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದ್ದು, ಈ ತನಿಖೆಯ ಪ್ರಭಾವದಿಂದ ಇದು ಆಗಿದೆಯೇ? ಎಂಬುದು ಖಚಿತವಾಗಿಲ್ಲ. ಬಚ್ಚನ್ 60000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.