ಏಷ್ಯಾ ಕಪ್ ಚಾಂಪಿಯನ್ ಆದ ಮಹಿಳೆಯರ ಟೀಂ ಇಂಡಿಯಾಗೆ ದೇಶದಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿವೆ. 74 ವರ್ಷದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಕೂಡ ಟ್ವಿಟ್ಟರ್'ನಲ್ಲಿ ವನಿತೆಯರ ತಂಡವನ್ನು ಅಭಿನಂದಿಸಿದ್ದಾರೆ.
ನವದೆಹಲಿ(ನ.06): ಭಾರತದ ವನಿತೆಯರ ಹಾಕಿ ತಂಡ ಚೀನಾ ವಿರುದ್ಧ ಅಭೂತಪೂರ್ವ ಜಯ ಸಾಧಿಸುವ ಮೂಲಕ ಏಷ್ಯಾ ಕಪ್ ಚಾಂಪಿಯನ್ ಆದ ಮಹಿಳೆಯರ ಟೀಂ ಇಂಡಿಯಾಗೆ ದೇಶದಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿವೆ. 74 ವರ್ಷದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಕೂಡ ಟ್ವಿಟ್ಟರ್'ನಲ್ಲಿ ವನಿತೆಯರ ತಂಡವನ್ನು ಅಭಿನಂದಿಸಿದ್ದಾರೆ.
ಸಿಂಗಾಪುರದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚೀನಾವನ್ನು 2-1 ಗೋಲುಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಭಾರತದ ವನಿತೆಯರ ತಂಡಕ್ಕೆ ಬಿಗ್ ಬಿ ಅಭಿನಂದಿಸಿದ್ದು ಹೀಗೆ...
