ಮುಂದಿನ ಚುನಾವಣೆಗೆ ರೂಪಿಸಿರುವ ಯೋಜನೆಗಳನ್ನು ಪೂರೈಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ್ದಾರೆ. ವಿಸ್ತಾರಕ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸುವರ್ಣನ್ಯೂಸ್​ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಮುಂದಿನ ಚುನಾವಣೆಗೆ ರೂಪಿಸಿರುವ ಯೋಜನೆಗಳನ್ನು ಪೂರೈಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ್ದಾರೆ.

ವಿಸ್ತಾರಕ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸುವರ್ಣನ್ಯೂಸ್​ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪದಾಧಿಕಾರಿಗಳ ಪೈಕಿ ಹಲವರು ವಿಸ್ತಾರಕ ಯೋಜನೆಯನ್ನು ಪೂರ್ಣಗೊಳಿಸಿಲ್ಲ. ನಾಳೆಯಿಂದ ಐದು ದಿನ ವಿಸ್ತಾರಕ ಯೋಜನೆ ವಿಸ್ತರಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದೇಶಿಸಿದ್ದಾರೆ.

ಅಮಿತ್ ಶಾ ನಿರ್ದೇಶನದಂತೆ ವಿಸ್ತಾರಕ ಯೋಜನೆ ಪರಿಪೂರ್ಣಗೊಳಿಸಲು ರಾಜ್ಯ ಬಿಜೆಪಿ ತೀರ್ಮಾನಿಸಿ ನಾಳೆಯಿಂದಲೇ ಯೋಜನೆಯನ್ನು ಕೈಗೆತ್ತಿಗೊಳ್ಳಲಿದೆ. ರಾಜ್ಯ ಭೇಟಿ ವೇಳೆ ವಿಸ್ತಾರಕ ಯೋಜನೆಯ ವರದಿಯನ್ನು ಅಮಿತ್ ಶಾ ಪರಿಶೀಲಿಸಲಿದ್ದಾರೆ.