Asianet Suvarna News Asianet Suvarna News

15 ಕೈ ಅತೃಪ್ತರಿಗೆ ಬಿಜೆಪಿ ಗಾಳ : ಪಕ್ಷಾಂತರ ಮಾಡೋರ್ಯಾರು..?

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಅನೇಕ ಅತೃಪ್ತರ ಪಡೆ ಸೃಷ್ಟಿಯಾಯಿತು. ಅದರೀಗ 15 ಮಂದಿ ಕಾಂಗ್ರೆಸ್ ಅತೃಪ್ತರು ಪಕ್ಷದಿಂದ ಹೊರ ಬರಲು ಸಿದ್ಧವಾಗದ ಹೊರತು ಯಾರನ್ನೂ ಸಂಪರ್ಕಿಸಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

Amit Shah Target To Poach 15 Congress Leaders in Karnataka
Author
Bengaluru, First Published Jan 6, 2019, 8:30 AM IST

ಬೆಂಗ​ಳೂರು :  ಸಮ್ಮಿಶ್ರ ಸರ್ಕಾರದ ವಿರುದ್ಧ ಅಸ​ಮಾ​ಧಾನಗೊಂಡಿ​ರು​ವ​ವರ ಸಂಖ್ಯೆ 15 ದಾಟದೇ ಅಂತಹ ಯಾವುದೇ ಗುಂಪನ್ನು ತಾವು ಭೇಟಿ​ಯಾ​ಗು​ವು​ದಿಲ್ಲ ಮತ್ತು ಈ ಅತೃ​ಪ್ತ​ರಿಗೆ ಭರ​ವಸೆ ಅಥವಾ ಆಶ್ವಾ​ಸನೆ ಬೇಕಿ​ದ್ದರೆ ಮಹಾ​ರಾಷ್ಟ್ರ ಮುಖ್ಯ​ಮಂತ್ರಿ ದೇವೇಂದ್ರ ಫಡ್ನ​ವೀಸ್‌ ಭೇಟಿ​ಯಾ​ಗಲಿ.

ಹೀಗಂತ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೇರ ತಾಕೀತು ಮಾಡಿದ ಹಿನ್ನೆ​ಲೆ​ಯಲ್ಲಿ ಕಾಂಗ್ರೆ​ಸ್‌ನ ಅತೃಪ್ತ ಪಡೆಯ ನೇತಾ​ರ ರಮೇಶ್‌ ಜಾರ​ಕಿ​ಹೊಳಿ ನೇತೃ​ತ್ವದ ನಾಲ್ಕು ಮಂದಿ ಶಾಸ​ಕರ ಗುಂಪಿನ ಕಾಂಗ್ರೆ​ಸ್‌​ನಿಂದ ಹೊರ ಬೀಳುವ ಯೋಜನೆ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಹಾಗಂತ ಈ ಪ್ರಯತ್ನ ಸಂಪೂರ್ಣ ನಿಂತಿಲ್ಲ. ಒಳ​ಗೊ​ಳಗೆ ಅತೃಪ್ತ ಶಾಸ​ಕರ ಗುಂಪು 15ರ ಗಡಿ ದಾಟಿ​ಸುವ ಪ್ರಯ​ತ್ನ ನಡೆದೇ ಇದೆ ಎಂದು ಉನ್ನತ ಮೂಲ​ಗಳು ತಿಳಿ​ಸಿ​ವೆ.

ರಮೇಶ್‌ ಜಾರ​ಕಿ​ಹೊಳಿ, ನಾಗೇಂದ್ರ, ಶಂಕರ್‌ ಸೇರಿ​ದಂತೆ ನಾಲ್ಕು ಮಂದಿ ಶಾಸ​ಕರ ಗುಂಪು ಅಮಿತ್‌ ಶಾ ಭೇಟಿ​ಗೆ ಪಟ್ಟು ಹಿಡಿದು ದೆಹ​ಲಿ​ಯಲ್ಲಿ ಬೀಡು ಬಿಟ್ಟಿತ್ತು. ರಾಜ್ಯ ನಾಯ​ಕರ ಆಶ್ವಾ​ಸನೆ ಸಾಕಾ​ಗು​ವು​ದಿಲ್ಲ. ನೇರ​ವಾಗಿ ಅಮಿತ್‌ ಶಾ ಅವರೇ ರಂಗ ಪ್ರವೇಶ ಮಾಡಿ​ದರೆ ಮತ್ತಷ್ಟುಅತೃ​ಪ್ತರು ನಮ್ಮ ಜತೆ ಸೇರು​ತ್ತಾರೆ. ಈ ಸಂದೇಶ ರವಾ​ನಿ​ಸಲು ಅಮಿತ್‌ ಶಾ ಭೇಟಿ ಮಾಡಿ​ಸುವಂತೆ ಕಾಂಗ್ರೆಸ್‌ ಅತೃ​ಪ್ತರ ಗುಂಪು ರಾಜ್ಯ ಬಿಜೆ​ಪಿಯ ಉನ್ನತ ನಾಯ​ಕ​ರೊ​ಬ್ಬ​ರನ್ನು ಒತ್ತಾ​ಯಿ​ಸಿ​ದ್ದ​ರು.

ಈ ನಾಯ​ಕರು ವಿತ್ತ​ಸ​ಚಿವ ಅರು​ಣ್‌ ​ಜೇಟ್ಲಿ ಮೂಲಕ ಸದರಿ ವಿಚಾ​ರ​ವನ್ನು ಅಮಿ​ತ್‌ ಶಾ ಅವ​ರಿಗೆ ಮುಟ್ಟಿ​ಸಿ​ದಾಗ ಅಮಿತ್‌ ಶಾ ಇಂತ​ಹ​ದೊಂದು ತಾಕೀತು ಮಾಡಿ​ದರು ಎಂದು ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕ​ರೊ​ಬ್ಬರ ಆಪ್ತ ಮೂಲ​ಗಳು ಹೇಳು​ತ್ತವೆ.

‘ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕರು ಪಕ್ಷ ತೊರೆದು ಬಿಜೆ​ಪಿ​ಯತ್ತ ಧಾವಿ​ಸು​ತ್ತಾರೆ. ಇಂತಹವರ ಸಂಖ್ಯೆ 15ಕ್ಕೂ ಹೆಚ್ಚಿದೆ ಎಂದು ಹಲವು ತಿಂಗ​ಳು​ಗ​ಳಿಂದ ರಾಷ್ಟ್ರ​ಮ​ಟ್ಟ​ದಲ್ಲಿ ಸುದ್ದಿ​ಮಾ​ಡ​ಲಾ​ಗು​ತ್ತಿದೆ. ಆದರೆ, ಇಂತಹ ಸಂಖ್ಯೆ ಮುಟ್ಟಲು ಇನ್ನು ಸಾಧ್ಯ​ವಾ​ಗಿಲ್ಲ. ಇಂತಹ ಪರಿ​ಸ್ಥಿ​ತಿ​ಯಲ್ಲಿ ಕೇವಲ ನಾಲ್ಕು ಮಂದಿ​ಯನ್ನು ನನ್ನ ಮುಂದೆ ನಿಲ್ಲಿಸಿದರೆ ರಾಷ್ಟ್ರ ಮಟ್ಟ​ದಲ್ಲಿ ತಪ್ಪು ಸಂದೇಶ ರವಾನೆ ಮಾಡಿ​ದಂತೆ ಆಗು​ತ್ತದೆ. ಹೀಗಾಗಿ ಇಂತಹ ಯಾವುದೇ ಭೇಟಿಯೂ ಸಾಧ್ಯ​ವಿಲ್ಲ. ಆದರೆ, ಉನ್ನತ ನಾಯ​ಕ​ರೊ​ಬ್ಬರ ಭೇಟಿ ಹಾಗೂ ಆಶ್ವಾ​ಸನೆ ಪಡೆ​ಯುವ ಮೂಲಕ ಬೇಲಿ ಮೇಲೆ ಕುಳಿ​ತಿ​ರುವ ಕಾಂಗ್ರೆಸ್‌ ಹಾಗೂ ಜೆಡಿ​ಎ​ಸ್‌ನ ಶಾಸ​ಕ​ರಿಗೆ ಸಂದೇಶ ರವಾನೆ ಮಾಡುವ ಉದ್ದೇ​ಶ​ವಿ​ದ್ದರೆ, ಮಹಾ​ರಾಷ್ಟ್ರ ಮುಖ್ಯಮಂತ್ರಿ ಫಡ್ನ​ವೀಸ್‌ ಅವ​ರನ್ನು ಇಂತಹ ಶಾಸ​ಕರ ಗುಂಪು (ಅದು ಕೂಡ ಈ ಗುಂಪಿನ ಸಂಖ್ಯೆ ಸಾಕಷ್ಟುಉತ್ತ​ಮ​ಗೊಂಡಾಗ) ಭೇಟಿ ಮಾಡಲಿ. ಇದಾ​ಗದ ಹೊರತು ನೇರ ಭೇಟಿ ಈ ಹಂತ​ದಲ್ಲಿ ಸಾಧ್ಯವೇ ಇಲ್ಲ’ ಎಂದು ಶಾ ಸ್ಪಷ್ಟ​ವಾಗಿ ತಿಳಿ​ಸಿ​ದ್ದಾರೆ ಎನ್ನ​ಲಾ​ಗಿ​ದೆ.

ಈ ಹಿನ್ನೆ​ಲೆ​ಯಲ್ಲಿ ಅಮಿತ್‌ ಶಾ ಭೇಟಿ ಮಾಡಿ ಅವ​ರಿಂದ ಖಚಿತ ಆಶ್ವಾ​ಸನೆ ಪಡೆದು ರಾಜೀ​ನಾ​ಮೆಗೆ ಮುಂದಾ​ಗಿದ್ದ ಕಾಂಗ್ರೆಸ್‌ ಅತೃ​ಪ್ತರ ಸಣ್ಣ ಗುಂಪು ತಮ್ಮ ಉದ್ದೇಶ ಈಡೇ​ರದೇ ರಾಜ್ಯಕ್ಕೆ ಹಿಂತಿ​ರು​ಗಿದೆ. ಆದರೆ, ಅತೃ​ಪ್ತರ ಈ ತಂಡ ಸುಮ್ಮ​ನಾ​ಗಿಲ್ಲ. ಬದ​ಲಾಗಿ ತಮ್ಮ ಗುಂಪಿನ ಸಂಖ್ಯೆ​ಯನ್ನು ಹೆಚ್ಚಿ​ಸುವ ಪ್ರಯ​ತ್ನ​ ನಡೆ​ಸಿದೆ ಎಂದು ತಿಳಿ​ದು​ ಬಂದಿ​ದೆ.

Follow Us:
Download App:
  • android
  • ios