ನವದೆಹಲಿ(ಜೂ.01): ಕೇಂದ್ರದ ನೂತನ ಗೃಹಸಚಿವರಾಗಿ ಅಮಿತ್ ಶಾ ಇಂದು ಅಧಿಕಾರ ಸ್ವೀಕರಿಸಿದರು. ಸಂಸತ್ತ್ಇನ ನಾರ್ಥ್ ಬ್ಲಾಕ್‌ಗೆ ಆಗಮಿಸಿದ ಅಮಿತ್ ಶಾ, ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕೃತವಾಗಿ ಕಾರ್ಯಭಾರ ಪ್ರಾರಂಭಿಸಿದರು.

ಗೃಹ ಸಚಿವರ ಕೊಠಡಿಗೆ ಆಗಮಿಸಿದ ಅಮಿತ್ ಶಾ ಅವರನ್ನು ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಗೌಬಾ ಸ್ವಾಗತಿಸಿದರು. ಈ ವೇಳೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗುಜರಾತ್ ಗೃಹ ಸಚಿವರಾಗಿ ಅನುಭವ ಹೊಂದಿರುವ ಅಮಿತ್ ಶಾ, ಕೇಂದ್ರ ಗೃಹ ಇಲಾಖೆಗೆ ಹೊಸ ರೂಪ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.