ಪ್ರಸಕ್ತ ವಿಧಾನಸಭಾ ಚುನಾವಣೆಗೆ ಗೆಲ್ಲಲು ಬೇಕಾದ ರಣತಂತ್ರ ರೂಪಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದರ ಜೊತೆಗೇ ಮುಂಬರುವ ೨೦೧೯ರ ಲೋಕಸಭಾಚುನಾವಣೆಗೂ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಬುನಾದಿ ಹಾಕತೊಡಗಿದ್ದಾರೆ.

ಬೆಂಗಳೂರು (ಮಾ. 14): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಗೆಲ್ಲಲು ಬೇಕಾದ ರಣತಂತ್ರ ರೂಪಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದರ ಜೊತೆಗೇ ಮುಂಬರುವ ೨೦೧೯ರ ಲೋಕಸಭಾ
ಚುನಾವಣೆಗೂ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಬುನಾದಿ ಹಾಕತೊಡಗಿದ್ದಾರೆ.

ಪರಿಣಾಮ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಎಲ್ಲ ಸದಸ್ಯರಿಗೂ ಟಿಕೆಟ್ ಸಿಗುವ ಖಾತರಿಯಿಲ್ಲ. ಅವರವರ ಸಾಧನೆ ಆಧರಿಸಿಯೇ ಟಿಕೆಟ್ ನೀಡಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ವರಿಷ್ಠರ ಪಾಲಿಗೆ ಕರ್ನಾಟಕದ ವಿಧಾನ ಸಭಾ ಚುನಾವಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಲೋಕಸಭಾ ಚುನಾವಣೆ. ಹೀಗಾಗಿಯೇ ಅಮಿತ್ ಶಾ ಪಕ್ಷ ಸಂಘಟನೆ ಸಂಬಂಧ ಈಗ ಅನುಸರಿಸುತ್ತಿರುವ ಪ್ರತಿ ನಡೆಯ ಹಿಂದೆ ಲೋಕಸಭಾ ಚುನಾವಣೆಯ ಸಿದ್ಧತೆಯೂ ಸೇರಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 25 ಸ್ಥಾನಗಳನ್ನಾದರೂ ಗೆಲ್ಲಲೇಬೇಕು ಎಂಬ ಗುರಿ ಹೊಂದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಅಮಿತ್ ಶಾ ಅವರು ಕರಾವಳಿ ಪ್ರದೇಶ ಮತ್ತು ಹೈದ್ರಾಬಾದ್-ಕರ್ನಾಟಕ ಪ್ರದೇಶಗಳ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡರು. ಈ ಪ್ರವಾಸದ ವೇಳೆ ಆಯಾ ವ್ಯಾಪ್ತಿ
ಯ ಪಕ್ಷದ ಲೋಕಸಭಾ ಸದಸ್ಯರ ಸಾಧನೆಗಳ ಬಗ್ಗೆ ಸ್ಥಳೀಯ ಹಿರಿಯ ಮುಖಂಡರಿಂದ ಮಾಹಿತಿಯನ್ನೂ ಕ್ರೋಢೀಕರಿಸಿದ್ದಾರೆ. ಜತೆಗೆ ಸೋಲನುಭವಿಸಿದ ಲೋಕಸಭಾ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬಹುದು ಎಂಬುದರ ಬಗ್ಗೆಯೂ ವಿವರ ಸಂಗ್ರಹಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈಗಷ್ಟೇ ಅಲ್ಲ. ಕಳೆದ ವರ್ಷದ ಆಗಸ್ಟ್‌ನಲ್ಲಿ ಮೂರು ದಿನಗಳ ಕಾಲ ಆಗಮಿಸಿದ್ದ ಅಮಿತ್ ಶಾ ಅವರು ಆಗಲೇ ಲೋಕಸಭಾ ಕ್ಷೇತ್ರಗಳ ಬಗ್ಗೆ ಗಮನ ಹರಿಸಿದ್ದರು. ಆಗಿನಿಂದಲೂ ಅಮಿತ್ ಶಾ ಅವರು ಸಂಘಟನೆ ವಿಷಯಕ್ಕೆ
ಸಂಬಂಧಿಸಿದಂತೆ ಏನೇ ಪ್ರಮುಖ ನಿರ್ಧಾರಗಳನ್ನು ಕೈಗೊಂಡರೂ ಅದಕ್ಕೆ ಲೋಕಸಭಾ ಕ್ಷೇತ್ರವನ್ನು ಜೋಡಣೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಹಾಲಿ ಸದಸ್ಯರು ಹಾಗೂ ಸೋತವರನ್ನು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ