ವೀರಶೈವ ಲಿಂಗಾಯತರಿಗೆ ಮಣೆ ಹಾಕಲು ಸಿಎಂ ತಂತ್ರಕ್ಕೆ ಅಮಿತ್ ಶಾ ಪ್ರತಿತಂತ್ರ ; ಚಾಣಕ್ಯ ತಂತ್ರ ವರ್ಕೌಟ್ ಆಗುತ್ತಾ?

Amit Shah Political Tactics
Highlights

`ವೀರಶೈವ ಲಿಂಗಾಯತರಿಗೆ ಮಣೆ ಹಾಕಲು ಸಿದ್ದರಾಮಯ್ಯ ತಂತ್ರ ರೂಪಿಸಿದರೆ  ಅಮಿತ್ ಶಾ ಪ್ರತಿತಂತ್ರ ರೂಪಿಸಿದ್ದಾರೆ. 

ಬಾಗಲಕೋಟೆ (ಮಾ. 29):  `ವೀರಶೈವ ಲಿಂಗಾಯತರಿಗೆ ಮಣೆ ಹಾಕಲು ಸಿದ್ದರಾಮಯ್ಯ ತಂತ್ರ ರೂಪಿಸಿದರೆ  ಅಮಿತ್ ಶಾ ಪ್ರತಿತಂತ್ರ ರೂಪಿಸಿದ್ದಾರೆ. 

ಉತ್ತರ ಕನಾ೯ಟಕದ 4 ಜಿಲ್ಲೆಗಳಲ್ಲಿ  ವೀರಶೈವ ಲಿಂಗಾಯತರಿಗೆ  ಟಿಕೆಟ್ ನೀಡಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ ಬೆನ್ನಲ್ಲೆ  ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.  ವೀರಶೈವ ಲಿಂಗಾಯತ ಸ್ವಾಮೀಜಿಗಳು ಸೇರಿ ಕಾಂಗ್ರೆಸ್ ವಿರುದ್ದ ಸೆಡ್ಡು ಹೊಡೆದ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಅಮಿತ್ ಶಾ.

ಬಿಜೆಪಿ ಚಾಣಕ್ಯನ ನಡೆ ಕುತೂಹಲ ಮೂಡಿಸಿದೆ.  100 ಕ್ಕೂ ಅಧಿಕ ಲಿಂಗಾಯತ  ಸ್ವಾಮೀಜಿಗಳೊಂದಿಗೆ ಅಮಿತ್ ಶಾ ಸಮಾಲೋಚನೆ ನಡೆಸಲಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರ ಭೇಟಿಗೆ  ಅಮಿತ್ ಶಾ ಮುಂದಾಗಿದ್ದಾರೆ. ವೀರಶೈವ ಲಿಂಗಾಯತ ಸ್ವಾಮೀಜಿಗಳು ಸಭೆ ನಡೆಸಿದ ಶಿವಯೋಗಿ ಮಂದಿರಕ್ಕೆ ಏಪ್ರಿಲ್ 3 ರಂದು ಭೇಟಿ ನೀಡಲು ಅಮಿತ್ ಶಾ ನಿಧಾ೯ರ ಮಾಡಿದ್ದಾರೆ. 

ಶಿವಯೋಗಿ  ಮಂದಿರಕ್ಕೆ ಭೇಟಿ ಮಾಡುವ ಮೂಲಕ ವೀರಶೈವರಿಗೆ, ಲಿಂಗಾಯತರಿಗೆ  ಪರಮಾಪ್ತರಾಗಲು  ಅಮಿತ್  ಶಾ‌ ಹೊರಟಿದ್ದಾರೆ.  ಅಮಿತ್ ಶಾ ಭೇಟಿಯನ್ನು  ಸಂಸದ ಪ್ರಹ್ಲಾದ ಜೋಷಿ ಸ್ಪಷ್ಟಪಡಿಸಿದ್ದಾರೆ.  ಈ ಕುರಿತು ಬಾಗಲಕೋಟೆಯಲ್ಲಿ ಪ್ರಹ್ಲಾದ್  ಜೋಷಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. 
 

loader