ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮುಂಬೈ: ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಲ್ಲಿನ ಬಂದ್ರಾದಲ್ಲಿರುವ ಠಾಕ್ರೆ ಅವರ 'ಮಾತೋಶ್ರೀ' ನಿವಾಸಕ್ಕೆ ಇಂದು ಅಮಿತ್ ಶಾ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್‌ ಭೇಟಿ ನೀಡಿ ಸುಮಾರು 75 ನಿಮಿಷಗಳ ಕಾಲ ಗುಪ್ತ ಮಾತುಕತೆ ನಡೆಸಿದರು.

ಅಮಿತ್ ಶಾ ಪಕ್ಷದ ಬಲವರ್ಧನೆಗೆ ಮೂರು ದಿನಗಳ ಕಾಲ ಮಹಾರಾಷ್ಟ್ರ ಪ್ರವಾಸ ಕೈಗೊಂಡ ಮರುದಿನವೇ ಈ ಬೆಳವಣಿಗೆ ನಡೆದಿದೆ.

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುನ್ನ ಎನ್‌ಡಿಎ ಸರ್ಕಾರ ತನ್ನ ಎಲ್ಲ ಮಿತ್ರ ಪಕ್ಷಗಳ ಜೊತೆ ಚರ್ಚಿಸುತ್ತಿದೆ. ಅಂತೆಯೇ ಇಂದು ಠಾಕ್ರೆ ಅವರನ್ನು ಶಾ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಶಿವ ಸೇನೆಯು ರಾಷ್ಟ್ರಪತಿ ಹುದ್ದೆಗೆ ಭಾರತದ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್‌. ಸ್ವಾಮಿನಾಥನ್ ಅವರನ್ನು ಅಭ್ಯರ್ಥಿಯನ್ನಾಗಿಸುವ ಸಲಹೆಯನ್ನು ನೀಡಿತ್ತು. ಜೊತೆಗೆ ಈ ಹುದ್ದೆಯ ಚುನಾವಣೆಗೆ ಸ್ವತಂತ್ರ ನಿಲುವನ್ನು ತಾಳುವುದಾಗಿ ಶಿವಸೇನೆ ಹೇಳಿತ್ತು.