ಮಾಸ್ಟರ್’ಮೈಂಡ್ ಭೇಟಿಯಾದ ಚಾಣಕ್ಯ: ಶಾ, ಧೋವಲ್ ಭೇಟಿ!
ಅಮಿತ್ ಶಾ, ರಾಜೀವ್ ಗೌಬಾ, ಅಜಿತ್ ಧೋವಲ್ ಮಾತುಕತೆ| ಕಣಿವೆ ರಾಜ್ಯದ ಭದ್ರತಾ ಸ್ಥಿತಿಗಳ ಕುರಿತು ತ್ರಿಮೂರ್ತಿಗಳ ಚರ್ಚೆ| ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಮಸೂದೆ ಮಂಡಿಸಲಿರುವ ಅಮಿತ್ ಶಾ| ನಾಳೆ ಮಸೂದೆ ಮಂಡಿಸಲು ಸಿದ್ಧತೆ ನಡೆಸಿರುವ ಕೇಂದ್ರ ಗೃಹ ಸಚಿವ|
ನವದೆಹಲಿ(ಆ04): ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯದ ಭದ್ರತಾ ಸ್ಥಿತಿಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಕತೆ ನಡೆಸಿದ್ದಾರೆ.
ನಾಳೆ ರಾಜ್ಯಸಭೆಯಲ್ಲಿ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ(ಎರಡನೇ ತಿದ್ದುಪಡಿ)ಮಸೂದೆಯನ್ನು ಮಂಡಿಸಲು ಸಜ್ಜಾಗಿದ್ದು, ಅನಿಶ್ಚಿತತೆ ನಡುವೆಯೇ ಕಣಿವೆಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಅಮಿತ್ ಶಾ, ರಾಜೀವ್ ಗೌಬಾ ಹಾಗೂ ಅಜಿತ್ ಧೋವಲ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಗುಪ್ತಚರ ಇಲಾಖೆ ಮುಖ್ಯಸ್ಥ ಅರವಿಂದ್ ಕುಮಾರ್ ಹಾಗೂ ರಾ ಮುಖ್ಯಸ್ಥ ಸಮಂತ್ ಗೋಯಲ್ ಕೂಡ ಉಪಸ್ಥಿತರಿದ್ದರು.
ಈ ಮೂವರ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು ಎಂಬುದಉ ಇನ್ನಷ್ಟೇ ಗೊತ್ತಾಗಬೇಕಿದೆ.