ರಾಯಪುರದಲ್ಲಿ ಸಭೆಯನ್ನುದ್ದೇಶಿ ಮಾತನಾಡುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾ, ಗಾಂಧಿ ಒಬ್ಬ ಚತುರ ಬನಿಯಾ ಆಗಿದ್ದನು, ಆದುದರಿಂದ ದೂರದೃಷ್ಟಿಯಿತ್ತು. ಕಾಂಗ್ರೆಸನ್ನು ವಿಸರ್ಜಿಸಬೇಕೆಂದು ಅವರು ಆಗಲೇ ಹೇಳಿದ್ದರು, ಎಂದು ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರನ್ನು ಏಕವಚನದಲ್ಲಿ ಸಂಭೋದಿಸಿ, ಆತ ಚತುರ ಬನಿಯಾ ಆಗಿದ್ದನು ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ವಿವಾದವನ್ನು ಸೃಷ್ಟಿಸಿದ್ದಾರೆ.

ಶುಕ್ರವಾರ ರಾಯಪುರದಲ್ಲಿ ಸಭೆಯನ್ನುದ್ದೇಶಿ ಮಾತನಾಡುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾ, ಗಾಂಧಿ ಒಬ್ಬ ಚತುರ ಬನಿಯಾ ಆಗಿದ್ದನು, ಆದುದರಿಂದ ದೂರದೃಷ್ಟಿಯಿತ್ತು. ಕಾಂಗ್ರೆಸನ್ನು ವಿಸರ್ಜಿಸಬೇಕೆಂದು ಅವರು ಆಗಲೇ ಹೇಳಿದ್ದರು, ಎಂದು ಅಮಿತ್ ಶಾ ಹೇಳಿದ್ದಾರೆ.

ಅಮಿತ್ ಶಾ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಅಮಿತ್ ಶಾ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಅವಮಾನ ಮಾಡಿದ್ದಾರೆ, ಅದಕ್ಕೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ಜಾತೀಯತೆಯನ್ನು ಹೋಗಲಾಡಿಸುವುದರ ಬದಲು, ಬಿಜೆಪಿಯು ರಾಷ್ಟ್ರಪಿತನನ್ನೇ ಜಾತಿಯಿಂದ ಗುರುತಿಸುತ್ತಿದೆ. ಇದು ಬಿಜೆಪಿ ಹಾಗೂ ಅದರ ಅಧ್ಯಕ್ಷನ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಇಂಥವರು ದೇಶವನ್ನು ಎಲ್ಲಿಗೆ ಕೊಂಡೊಯ್ಯಬಲ್ಲರು ಎಂದು ಪ್ರಶ್ನಿಸಿರುವ ಸುರ್ಜೆವಾಲಾ, ಅಮಿತ್ ಶಾ ಹಾಗೂ ಪ್ರಧಾನಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.