1) ನರ್ಮದಾ ಯೋಜನೆ ಪೂರ್ಣಗೊಳಿಸಲು ಯುಪಿಎ ಸರಕಾರ ಯಾಕೆ ಅನುಮತಿ ಕೊಡಲಿಲ್ಲ?2) ನರ್ಮದಾ ಅಣೆಕಟ್ಟು ಗೇಟುಗಳನ್ನು ಮುಚ್ಚಲು ಕಾಂಗ್ರೆಸ್ ಯಾಕೆ ಅನುಮತಿ ಕೊಡಲಿಲ್ಲ?
ಗಾಂಧಿಧಾಮ್(ನ. 04): ಗುಜರಾತ್ ವಿಚಾರದಲ್ಲಿ ಬಿಜೆಪಿ ಸುಳ್ಳುಗಳನ್ನೇ ಹೇಳಿಕೊಂಡು ಲಾಭ ಮಾಡಿಕೊಳ್ಳುತ್ತಿದೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಗುಜರಾತ್ ರಾಜ್ಯಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆ ಏನು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರು ಪ್ರಶ್ನೆಸಿದ್ದಾರೆ. ಕಚ್ಛ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಹುಲ್'ಗೆ ಅಮಿತ್ ಶಾ 5 ಪ್ರಶ್ನೆಗಳು:
1) ನರ್ಮದಾ ಯೋಜನೆ ಪೂರ್ಣಗೊಳಿಸಲು ಯುಪಿಎ ಸರಕಾರ ಯಾಕೆ ಅನುಮತಿ ಕೊಡಲಿಲ್ಲ?
2) ನರ್ಮದಾ ಅಣೆಕಟ್ಟು ಗೇಟುಗಳನ್ನು ಮುಚ್ಚಲು ಕಾಂಗ್ರೆಸ್ ಯಾಕೆ ಅನುಮತಿ ಕೊಡಲಿಲ್ಲ?
3) ಕಚ್'ನ ರನ್ ಅಥವಾ ಉಪ್ಪುನೀರಿನ ಪ್ರದೇಶಕ್ಕೆ ಯಾಕೆ ವಿಶೇಷ ಅನುದಾನ ಕೊಡಲಿಲ್ಲ?
4) ಗಾಂಧಿನಗರಕ್ಕೆ ಯಾಕೆ ಕೆಂದ್ರದ ಅನುದಾನ ಸಿಕ್ಕಿರಲಿಲ್ಲ?
5) ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಗುಜರಾತ್'ಗೆ ಹಲವು ವರ್ಷ ಕಚ್ಚಾ ತೈಲದ ರಾಯಲ್ಟಿ ಧನವನ್ನು ಯಾಕೆ ಕೊಡಲಿಲ್ಲ?
ಗುಜರಾತ್'ನಲ್ಲಿ ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿ. 18ರಂದು ಮತ ಎಣಿಕೆ ನಡೆಯಲಿದೆ.
