ಬೆಂಗಳೂರು(ಮಾ.02): ಡೈರಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಚಿವರ ರಾಜೀನಾಮೆ ಬಗ್ಗೆ ಉಲ್ಲೇಖಿಸಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿರುದ್ಧ ಸಚಿವರಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಮಧ್ಯೆ ನಾಲ್ಕು ದಿನಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ಕೆಪಿಸಿಸಿ ಪದಾಧಿಕಾರಿಗಳಿಂದ ಪತ್ರ ಬರೆಯಲ್ಪಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲೂ ಅಸಮಾಧಾನ ವ್ಯಕ್ತಗೊಂಡಿದೆ.

ಅಮಿನ್ ಮಟ್ಟು ಬದಲಾವಣೆಗೆ ಆಗ್ರಹ
ಮೊನ್ನೆಯಷ್ಟೇ ಸಿಎಂ ಮಾಧ್ಯಮ ಸಲಹೆಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಸಚಿವ ಆರ್. ವಿ. ದೇಶಪಾಂಡೆ, ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಅಮೀನ್ ಮಟ್ಟು ಅವರಿಗೆ ಅಂತಹ ಅಧಿಕಾರ ಕೊಟ್ಟಿಲ್ಲ, ಅವರು ತಮ್ಮ ಇತಿಮಿತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದಿದ್ದಾರೆ.
ಇನ್ನು ಅಮೀನ್ ಮಟ್ಟು ಫೇಸ್ ಬುಕ್ ಸ್ಟೇಟಸ್ ವಿಚಾರ ನಿನ್ನೆಯ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿದ್ದು, ಮಾಧ್ಯಮ ಸಲಹೆಗಾರರನ್ನು ಬದಲಿಸುವಂತೆಯೂ ಸಭೆಯಲ್ಲಿ ಹಿರಿಯ ಸಚಿವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಿ ವಿವಾದ ಪರಿಹರಿಸುವುದಾಗಿ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ಇನ್ನು ದಿನೇಶ್ ಅಮೀನ್ ಮಟ್ಟು ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಹುದ್ದೆಯಿಂದ ಬದಲಿಸಿ ಬೇರೆಯವರನ್ನು ನೇಮಕ ಮಾಡಿಕೊಳ್ಳುವಂತೆ ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಒಟ್ಟಾರೆ, ಡೈರಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಮಾಧ್ಯಮ ಸಲಹೆಗಾರರ ಸ್ಟೇಟಸ್ ಈಗ ಸಚಿವರ ಕೋಪ ನೆತ್ತಿಗೇರುವಂತೆ ಮಾಡಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.