ತಾಜ್ ಮಹಲ್  ಭಾರತೀಯ ಸಂಸ್ಕೃತಿಯಲ್ಲ, ಇದನ್ನು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂಬ ಬಿಜೆಪಿ ಶಾಸಕನ ಸಂಗೀತ್ ಸೋಮ್ ಹೇಳಿಕೆಯನ್ನು ಉಲ್ಲೇಖಿಸುತ್ತಾ, ದೇಶದ ಹೆಮ್ಮೆಯನ್ನು ಹೆಚ್ಚಿಸುವ ಪರಂಪರೆಯನ್ನು, ಇತಿಹಾಸವನ್ನು  ಬಿಟ್ಟು ದೇಶ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ (ಅ.17): ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲ, ಇದನ್ನು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂಬ ಬಿಜೆಪಿ ಶಾಸಕನ ಸಂಗೀತ್ ಸೋಮ್ ಹೇಳಿಕೆಯನ್ನು ಉಲ್ಲೇಖಿಸುತ್ತಾ, ದೇಶದ ಹೆಮ್ಮೆಯನ್ನು ಹೆಚ್ಚಿಸುವ ಪರಂಪರೆಯನ್ನು, ಇತಿಹಾಸವನ್ನು ಬಿಟ್ಟು ದೇಶ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಪರಂಪರೆ, ಇತಿಹಾಸದ ಬಗ್ಗೆ ಹೆಮ್ಮೆ ಪಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಾಲಕ್ರಮೇಣ ನಾವು ನಮ್ಮತನವನ್ನು, ಸ್ವತಂತಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರದಾನಿ ಮೋದಿ ಹೇಳಿದ್ದಾರೆ.

ಷಹಜಹಾನ್’ನನ್ನು ಭಾರತದ ಭವ್ಯ ಇತಿಹಾಸದ ಭಾಗವಾಗಿ ಪರಿಗಣಿಸುವುದಾದರೆ, ನಾವು ಇತಿಹಾಸವನ್ನೇ ಬದಲಿಸುತ್ತೇವೆ ಎಂದು ಪೂರ್ಣ ವಿಶ್ವಾಸದೊಂದಿಗೆ ಹೇಳಬಲ್ಲೆ' ಎಂದು ಸಂಗೀತ್ ಸೋಮ್ ನಿನ್ನೆ ಹೇಳಿದ್ದರು. ಮೊಘಲ್ ದೊರೆ ನಿರ್ಮಿಸಿದ ತಾಜ್ ಮಹಲ್ 'ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು' ಎಂದು ಪರಿಗಣಿಸುವುದನ್ನು ಅವರು ವಿರೋಧಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರ ಹೇಳಿಕೆಗೆ ಸಮಜಾಯಿಷಿ ಕೇಳಿದ್ದಾರೆ ಎನ್ನಲಾಗಿದೆ.