ಶೇ.52 ಮಂದಿ ಒಬಾಮ ಅವರ ಅವಧಿಯೇ ಚೆನ್ನಾಗಿತ್ತು ಎಂದರೆ, ಶೇ.43ರಷ್ಟು ಮಂದಿಯಷ್ಟೇ ಟ್ರಂಪ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್(ಫೆ.03): ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಇನ್ನೂ 2 ವಾರಗಳಾಗಿಲ್ಲ. ಅಷ್ಟರಲ್ಲೇ, ಅಮೆರಿಕನ್ನರಲ್ಲಿ ಟ್ರಂಪ್ ಬಗ್ಗೆ ಅಸಹನೆ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಬಹುತೇಕ ಅಮೆರಿಕನ್ನರು ಬರಾಕ್ ಒಬಾಮ ಅವರೇ ಮತ್ತೆ ಅಧ್ಯಕ್ಷರಾಗಲಿ ಎಂದೂ, ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದೂ ಬಯಸುತ್ತಿದ್ದಾರೆ. ಹೀಗೆಂದು ಪಬ್ಲಿಕ್ ಪಾಲಿಸಿ ಪೋಲಿಂಗ್‌'ನವರು ನಡೆಸಿದ ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಶೇ.52 ಮಂದಿ ಒಬಾಮ ಅವರ ಅವಧಿಯೇ ಚೆನ್ನಾಗಿತ್ತು ಎಂದರೆ, ಶೇ.43ರಷ್ಟು ಮಂದಿಯಷ್ಟೇ ಟ್ರಂಪ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಟ್ರಂಪ್‌ರ ವಲಸೆ ನೀತಿಯನ್ನು ಶೇ.49 ಮಂದಿ ವಿರೋಧಿಸಿದರೆ, ಶೇ.47 ಮಂದಿ ಬೆಂಬಲಿಸಿದ್ದಾರೆ ಎಂದೂ ಸಮೀಕ್ಷೆ ತಿಳಿಸಿದೆ.