ಭಾರತದ ಸರ್ಜಿಕಲ್ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಉತ್ತರಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್​ಗಳು ಈಗ ವಿವಾದಕ್ಕೆ ಕಾರಣವಾಗಿವೆ. ಹತ್ತು ವರ್ಷಗಳ ಹಿಂದೆ ಇರಾಕ್​'ನಲ್ಲಿ ಹೋರಾಡಿದ ಅಮೆರಿಕ ಯೋಧರು ಬಿಜೆಪಿ ಪೋಸ್ಟರ್​'ನಲ್ಲಿ ಕಾಣಿಸಿಕೊಂಡಿದ್ದಾರೆ! ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಅನೇಕ ಸ್ಥಳೀಯ ಬಿಜೆಪಿ ಮುಖಂಡರ ಭಾವಚಿತ್ರವಿರುವ ಪೋಸ್ಟರ್​'ನಲ್ಲಿ ಭಾರತೀಯ ಸೈನಿಕರ ಬದಲು ಅಮೆರಿಕದ ಯೋಧರ ಚಿತ್ರ ಬಳಸಲಾಗಿದೆ. ಈ ಫೋಟೋ 10 ವರ್ಷಗಳ ಹಿಂದೆ ಇರಾಕ್​ನ ವೈನಾಟ್'​ನಲ್ಲಿ ತೆಗೆದ ಅಮೆರಿಕದ ಸ್ಕ್ರೀಮಿಂಗ್ ಈಗಲ್ಸ್ ಪಡೆಯ 101 ಏರ್​ಬೋರ್ನ್ ಡಿವಿಷನ್​ನ ಸೈನಿಕರದ್ದಾಗಿದೆ.

ವಾರಣಾಸಿ(ಅ.25): ಭಾರತದ ಸರ್ಜಿಕಲ್ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಉತ್ತರಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್​ಗಳು ಈಗ ವಿವಾದಕ್ಕೆ ಕಾರಣವಾಗಿವೆ. ಹತ್ತು ವರ್ಷಗಳ ಹಿಂದೆ ಇರಾಕ್​'ನಲ್ಲಿ ಹೋರಾಡಿದ ಅಮೆರಿಕ ಯೋಧರು ಬಿಜೆಪಿ ಪೋಸ್ಟರ್​'ನಲ್ಲಿ ಕಾಣಿಸಿಕೊಂಡಿದ್ದಾರೆ!

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಅನೇಕ ಸ್ಥಳೀಯ ಬಿಜೆಪಿ ಮುಖಂಡರ ಭಾವಚಿತ್ರವಿರುವ ಪೋಸ್ಟರ್​'ನಲ್ಲಿ ಭಾರತೀಯ ಸೈನಿಕರ ಬದಲು ಅಮೆರಿಕದ ಯೋಧರ ಚಿತ್ರ ಬಳಸಲಾಗಿದೆ. ಈ ಫೋಟೋ 10 ವರ್ಷಗಳ ಹಿಂದೆ ಇರಾಕ್​ನ ವೈನಾಟ್'​ನಲ್ಲಿ ತೆಗೆದ ಅಮೆರಿಕದ ಸ್ಕ್ರೀಮಿಂಗ್ ಈಗಲ್ಸ್ ಪಡೆಯ 101 ಏರ್​ಬೋರ್ನ್ ಡಿವಿಷನ್​ನ ಸೈನಿಕರದ್ದಾಗಿದೆ.

ಬ್ಯಾಂಡ್ ಆಫ್ ಬ್ರದರ್ಸ್ ಎಂಬ ಮಿನಿಸಿರೀಸ್ ಮೂಲಕ ಈ ಚಿತ್ರ ಪ್ರಸಿದ್ಧಿ ಪಡೆದಿದೆ.ಸರ್ಜಿಕಲ್ ದಾಳಿಯನ್ನು ಬಿಜೆಪಿ ತನ್ನ ಸಾಧನೆ ಎಂದು ಬಿಂಬಿಸುವ ಪ್ರಯತ್ನ ನಡೆಸಿರುವುದು ಈಗಾಗಲೇ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.