ಕ್ಯಾಟ್ವಾಕ್ ಮಾಡುತ್ತಲೇ ಸ್ತನ್ಯಪಾನ ಮಾಡಿಸಿದ ಮಾಡೆಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Jul 2018, 2:03 PM IST
American model breastfeeding baby on catwalk
Highlights

ಮಾಡೆಲ್ ಓರ್ವರು ಕ್ಯಾಟ್ ವಾಕ್ ಮಾಡುತ್ತಲೇ ಮಗುವಿಗೆ ಸ್ತನ್ಯ ಪಾನ ಮಾಡಿಸಿರುವುದು ಇದೀಗ ಸಾಕಷ್ಟು ವೈರಲ್ ಆಗಿದೆ. 

ವಾಷಿಂಗ್ಟನ್:  ಅಮೆರಿಕಾದ ಮಾಡೆಲ್ ಓರ್ವರು ರ‍್ಯಾಂಪ್ ಮೇಲೆಯೇ ತಮ್ಮ ಪುತ್ರಿಗೆ ಎದೆ ಹಾಲುಣಿಸುತ್ತಾ ಕ್ಯಾಟ್ ವಾಕ್ ಮಾಡಿದ್ದು ಇದೀಗ ವೈರಲ್ ಆಗಿದೆ. 

ನಾಗರಿಕತೆ ನಾಗಲೋಟದಲ್ಲಿ ಸಾಗುತ್ತಿದ್ದರೂ ಕೂಡ ಮಹಿಳೆಯರು ಮಗುವಿಗೆ ಸಾರ್ವಜನಿಕವಾಗಿ ಹಾಲುಣಿಸಲು ಮುಜುಗರ ಪಡುತ್ತಾರೆ. ಇಂತಹ ಮುಜುಗರಕ್ಕೆ ಫುಲ್ ಸ್ಟಾಪ್ ಹಾಕುವುದೇ ಇದರ ಉದ್ದೇಶವಾಗಿದೆ. 

ಸ್ವಿಮ್ ಸೂಟ್ ಧರಿಸಿದ್ದ ಮರಾ ಮಾರ್ಟಿನ್ ಮಗುವಿಗೆ ಎದೆ ಹಾಲುಣಿಸುತ್ತಾನೆ ವಾಕ್ ಮಾಡಿದ್ದಾರೆ. ಬಂಗಾರದ ಬಣ್ಣದ ಬಿಕಿನಿಯಲ್ಲಿ ತಮ್ಮ 5 ತಿಂಗಳ ಪುತ್ರಿಯನ್ನಪ್ಪಿ ಹಾಲುಣಿಸುತ್ತಾ ನಡೆದಿದ್ದಾರೆ. 

ಈ ಚಿತ್ರವನ್ನು ಇನ್ ಸ್ಟಾಗ್ರಾಮಲ್ಲಿ ಪೋಸ್ಟ್ ಮಾಡಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಕಾರಾತ್ಮಕವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮಾರ್ಟಿನ್ ಧನ್ಯವಾದ ಅರ್ಪಿಸಿದ್ದಾರೆ. 

ಈ ರೀತಿಯಾಗಿ ನಡೆದಿರುವು ತಾವು ಹಾಗೂ ತಮ್ಮ ಪುತ್ರಿ ಹೆಡ್ ಲೈನ್ ಆಗುತ್ತೇವೆ ಎಂದು ಎಣಿಸಿರಲಿಲ್ಲ ಎಂದು ಹೇಳಿದ್ದಾರೆ. 

loader