ಅಮೆರಿಕದ ನ್ಯಾಯಾಲಯವೊಂದು ಲೈಂಗಿಕ ಚಟುವಟಿಕೆಯ ವ್ಯಾಪಾರಕ್ಕೆಂದೇ ಮಕ್ಕಳನ್ನು ಅಪಹರಣ ಮಾಡುತ್ತಿದ್ದ, ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ 472 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನ್ಯೂಯಾರ್ಕ್(ನ.24): ಮಕ್ಕಳನ್ನು ಅಪಹರಣ ಮಾಡುವವರಿಗೆ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ನ್ಯಾಯಾಲಯಗಳು ಜೀವಾವಧಿ ಇಲ್ಲವೇ ಗರಿಷ್ಠ ಗಲ್ಲು ಶಿಕ್ಷೆ ವಿಧಿಸುವುದು ಗೊತ್ತು.

ಆದರೆ ಅಮೆರಿಕದ ನ್ಯಾಯಾಲಯವೊಂದು ಲೈಂಗಿಕ ಚಟುವಟಿಕೆಯ ವ್ಯಾಪಾರಕ್ಕೆಂದೇ ಮಕ್ಕಳನ್ನು ಅಪಹರಣ ಮಾಡುತ್ತಿದ್ದ, ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ 472 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬ್ರೋಕ್ ಫ್ರಾಂಕ್ಲಿನ್ (31) ಎಂಬಾತನಿಗೆ ವಿಧಿಸಲಾದ ಈ ಶಿಕ್ಷೆ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ್ದು ಎನ್ನಲಾಗಿದೆ. ಈತನ ವಿರುದ್ಧ ವಿವಿಧ ಕೋರ್ಟ್'ಲ್ಲಿ ಒಟ್ಟಾರೆ 30 ಕೇಸುಗಳು ದಾಖಲಾಗಿದ್ದವು.