ಭರ್ಜರಿ ಶಾಪಿಂಗ್‌ಗೆ ಮಾರಿಷಸ್‌ ಅಧ್ಯಕ್ಷೆಯ ಪಟ್ಟವೇ ಹೋಯ್ತು!

First Published 11, Mar 2018, 8:56 AM IST
Ameenah Gurib Fakim Mauritius President to resign over Shopping
Highlights

ಮಹಿಳೆಯರ ಶಾಪಿಂಗ್‌ ಸಾಹಸದ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಆದರೆ ಇಂಥ ಶಾಪಿಂಗ್‌ ಸಾಹಸ ಇದೀಗ ಮಾರಿಷಸ್‌ನ ಅಧ್ಯಕ್ಷರ ಪಟ್ಟಕ್ಕೇ ಭಂಗ ತಂದಿದೆ.

ಮಹಿಳೆಯರ ಶಾಪಿಂಗ್‌ ಸಾಹಸದ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಆದರೆ ಇಂಥ ಶಾಪಿಂಗ್‌ ಸಾಹಸ ಇದೀಗ ಮಾರಿಷಸ್‌ನ ಅಧ್ಯಕ್ಷರ ಪಟ್ಟಕ್ಕೇ ಭಂಗ ತಂದಿದೆ. ಹೌದು. ಸರ್ಕಾರೇತರ ಸಂಸ್ಥೆಯೊಂದು ನೀಡಿದ್ದ ಕ್ರೆಡಿಟ್‌ ಕಾರ್ಡ್‌ ಬಳಸಿ ವಿದೇಶಗಳಲ್ಲಿ ಭಾರೀ ಮೌಲ್ಯದ ಬಟ್ಟೆ, ಆಭರಣ ಖರೀದಿಸಿದ ಆರೋಪವೊಂದು ಇದೀಗ ಮಾರಿಷಸ್‌ನ ಮೊದಲ ಮಹಿಳಾ ಅಧ್ಯಕ್ಷೆ ಅಮಿನಾಹ್‌ ಗುರೀಬ್‌ ಅವರಿಗೆ ಅಂಟಿಕೊಂಡಿದೆ.

ಹೀಗಾಗಿ ಅವರಿಗೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದ್ದು, ಅವರು ಶೀಘ್ರವೇ ತಮ್ಮ ಸ್ಥಾನಕ್ಕೆ ಗುಡ್‌ಬೈ ಹೇಳಲಿದ್ದಾರೆ ಎನ್ನಲಾಗಿದೆ. ಶಿಕ್ಷಣಕ್ಕೆ ನೆರವಾಗುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ತನ್ನ ಸಂಘಟನೆಯ ಗೌರವ ಸದಸ್ಯರಾಗಿದ್ದ ಅಮಿನಾಹ್‌ಗೆ ಕ್ರೆಡಿಟ್‌ ಕಾರ್ಡ್‌ ನೀಡಿತ್ತು. ಅವರು ಇದನ್ನು ಕಾನೂನು ಬಾಹಿರವಾಗಿ ವಿದೇಶಗಳಲ್ಲಿ ಸ್ವಂತ ವಸ್ತುಗಳ ಖರೀದಿಗೆ ಬಳಸಿಕೊಂಡಿದ್ದಾರೆ. ಇದು ಭಾರೀ ವಿವಾಹದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಮಿನಾಹ್‌ಗೆ ರಾಜೀನಾಮೆಗೆ ಸೂಚಿಸಲಾಗಿದೆ.

loader