Asianet Suvarna News Asianet Suvarna News

‘ಎ.ಸಿ. ಸಮಸ್ಯೆಯಿಂದ ಕಲಾಪಕ್ಕೆ ಬಂದಿರಲಿಲ್ಲ!'

ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಜೂನ್‌ 5ರಿಂದ 16ರವರೆಗೆ 10 ದಿನಗಳ ಕಾಲ ನಡೆಯಲಿದ್ದು, ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.

Ambreesh Speak about why not absent session
  • Facebook
  • Twitter
  • Whatsapp

ಬೆಂಗಳೂರು(ಮೇ.28): ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪದಲ್ಲಿ ಸರಿಯಾಗಿ ಹಾಜರಾಗಲು ಆಗಲಿಲ್ಲ ಎಂದು ಶಾಸಕ ಅಂಬರೀಷ್‌ ಸ್ಪಷ್ಟನೆ ನೀಡಿದ್ದಾರೆ. ಸದನದಲ್ಲಿನ ಹವಾನಿಯಂತ್ರಿತ ವ್ಯವಸ್ಥೆ ನನ್ನ ಆರೋಗಕ್ಕೆ ಸರಿಹೊಂದುತ್ತಿ​ರಲಿಲ್ಲ. ಆದ್ದರಿಂದ ಅನಾ​ರೋಗ್ಯಕ್ಕೀಡಾಗಿ ಹಿಂದಿನ ಅಧಿವೇಶನಗಳಿಗೆ ಹಾಜರಾ​ಗಲಿಲ್ಲ. ಇತ್ತೀಚಿಗೆ ಚಿಕಿತ್ಸೆ ಪಡೆದು ಬಂದಿದ್ದೇನೆ. ಜೂನ್‌ 5ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ತಪ್ಪದೆ ಭಾಗವಹಿಸುತ್ತೇನೆ ಎಂದು ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜೂನ್‌ 5ರಿಂದ 10 ದಿನ ಅಧಿವೇಶನ

ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಜೂನ್‌ 5ರಿಂದ 16ರವರೆಗೆ 10 ದಿನಗಳ ಕಾಲ ನಡೆಯಲಿದ್ದು, ಈ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಜೂನ್‌ 5ರಿಂದ 9ರವರೆಗೆ ಹಾಗೂ ಜೂನ್‌ 12ರಿಂದ 16ರವರೆಗೆ ಒಟ್ಟು 10 ದಿನಗಳ ಕಾಲ ಸರ್ಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳು ನಡೆಯಲಿದ್ದು, ಜೂನ್‌ 10 ಎರಡನೇ ಶನಿವಾರ ಹಾಗೂ ಜೂನ್‌ 11ರಂದು ಭಾನುವಾರ ಸರ್ಕಾರಿ ರಜೆ ನಿಮಿತ್ತ ಕಲಾಪ ನಡೆಯುವುದಿಲ್ಲ ಎಂದು ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios