ಗರಂ ಆದ ಅಂಬಿ

ಬೆಂಗಳೂರು(ಆ.04): ಮುಖ್ಯಮಂತ್ರಿ ಕರೆದ ಕಾವೇರಿ ಕಣಿವೆ ಸಚಿವರ ಸಭೆಗೆ ಮಾಜಿ ಸಚಿವ ಅಂಬರೀಷ್ ಆಗಮಿಸಿದ್ರು. ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಅಂಬರೀಷ್ ಬಂದವರೆ ತಮ್ಮ ಕಾರನ್ನು ಸಿಎಂ ಕಾರಿನ ಪಕ್ಕದಲ್ಲಿ ಹಾಕಿ ಅಂತಾ ಚಾಲಕನಿಗೆ ಸೂಚನೆ ಕೊಟ್ಟರು. ಆದ್ರೆ, ಪೊಲೀಸ್ ಸಿಬ್ಬಂದಿ ಹಾಕಲು ಬಿಡಲಿಲ್ಲ. ಆಗ ಪೊಲೀಸರನ್ನು ತರಾಟೆಗೆ ತಗೆದುಕೊಂಡ ಅಂಬರೀಷ್, ಸಿಎಂದೇನು ಮಹಾ ಕಾರಾ ಎಂದು ಗದರಿದಾಗ ಪೊಲೀಸರು ಅವರ ಕಾರು ನಿಲ್ಲಿಸಲು ಅನುಮತಿ ಕೊಟ್ಟರು.