Asianet Suvarna News Asianet Suvarna News

ಪೊಲೀಸರನ್ನ ಆಟವಾಡಿಸಿದ್ದ ಚಾಲಾಕಿ ಜನಾರ್ದನ ರೆಡ್ಡಿ ಇಷ್ಟು ದಿನ ಅಡಗಿದ್ದೆಲ್ಲಿ ಗೊತ್ತಾ?

 ಅರೆಸ್ಟ್ ಆಗುವಕ್ಕಿಂತ ಮುಂಚೆ 4 ದಿನದಿಂದ ಸಿಸಿಬಿ ಪೊಲೀಸರನ್ನ ಆಟವಾಡಿಸಿದ್ದ ಜನಾರ್ದನ ರೆಡ್ಡಿ ಅಡಗಿದ್ದೆಲ್ಲಿ? ಸುವರ್ಣ ನ್ಯೂಸ್ ನಲ್ಲಿ ರೆಡ್ಡಿ ಅಡಗುತಾಣದ ಬಗ್ಗೆ ಕಂಪ್ಲೀಟ್ ಡಿಟೇಲ್.

Ambident Case Where Did Janardhan Reddy Hide Before Appearing For Probe
Author
Bengaluru, First Published Nov 10, 2018, 6:20 PM IST

ಬೆಂಗಳೂರು, [ನ.10]: ಆಂಬಿಡೆಂಟ್ ಹಗರಣವನ್ನ ಕ್ಲೋಸ್ ಮಾಡಿಸಲು ಬಿಗ್ ಡೀಲ್ ನಡೆಸಿದ ಮೇರೆಗೆ ಬಂಧನವಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನ ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ ಅರೆಸ್ಟ್ ಆಗುವಕ್ಕಿಂತ ಮುಂಚೆ ನಾಲ್ಕೖದು ದಿನ ಸಿಸಿಬಿ ಪೊಲೀಸರ ಕಣ್ಣಿಗೆ ಮಣ್ಣುಗ್ಗಿ ಜನಾರ್ದನ ರೆಡ್ಡಿ ಅಡಗಿ ಕುಳಿತಿದ್ದದ್ದು ಎಲ್ಲಿ ? ಅನ್ನೋದು ಇದೀಗ ಬಯಲಾಗಿದೆ. ಸ್ವತಃ ರೆಡ್ಡಿ ಮನೆಗೆಲಸದವರು ಮಾಹಿತಿ ನೀಡಿದ್ದಾರೆ.

ಆಂಬಿಡೆಂಟ್ ಹಗರಣ: ಕೊನೆಗೂ ಜನಾರ್ದನ ರೆಡ್ಡಿ ಅರೆಸ್ಟ್..!

ಹೈದ್ರಾಬಾದ್ ನಲ್ಲಿರುವ ಜೂಬ್ಲಿ‌ಹಿಲ್ಸ್ ಮನೆಯಲ್ಲಿ ರೆಡ್ಡಿ ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 2  ದಿನಗಳ ಹಿಂದೆ  ಮನೆಯಲ್ಲಿ ಇರೋದಾಗಿ ಮನೆಗೆಲಸದವರು ಮಾಹಿತಿ ನೀಡಿದ್ದಾರೆ.

ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ

"

ಆದ್ರೆ, ಅದಕ್ಕೂ ಮೊದಲು ಹೈದರಬಾದ್ ಗೆ ಸಿಸಿಬಿ ತಂಡ ಬಂದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆಯೇ ರೆಡ್ಡಿ ಹೈದ್ರಾಬಾದ್ ನಲ್ಲಿರುವ ಜೂಬ್ಲಿ‌ಹಿಲ್ಸ್ ಮನೆಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಸೀದಾ ಬೆಂಗಳೂರಿಗೆ ವಾಪಸ್ ಆಗಿದ್ದ ರೆಡ್ಡಿ ವಕೀಲರನ್ನು ಭೇಟಿ ಮಾಡಿ, ಬಳಿಕ ಸಿಸಿಬಿ ವಿಚಾರಣೆಗೆ ಆಗಮಿಸಿದ್ದು, ಈ ವೇಳೆ ಸಿಸಿಬಿ ಪೊಲೀಸರು ರೆಡ್ಡಿಯನ್ನ ಬಂಧಿಸಿದ್ದಾರೆ.

ಮೂರು ದಿನಗಳಿಂದ ರೆಡ್ಡಿ ಎರಡೂ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರಿಗೆ ಆಟ ಆಡಿಸುತ್ತಿದ್ದರು. ಅಷ್ಟೇ ಅಲ್ಲದೇ 2 ದಿನಗಳ ಹಿಂದೆ ತಮ್ಮ ಪತ್ನಿಗೆ ಲ್ಯಾಂಡ್ ಲೈನ್ ನಿಂದ ಕರೆ ಮಾಡಿದ್ದರು. 

Follow Us:
Download App:
  • android
  • ios