ಅಂಬಿಡೆಂಟ್ ಕಂಪನಿ ಕೋಟಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಜನಾರ್ದನ ರೆಡ್ಡಿ ಇನ್ನೂ ಒಂದು ದಿನ ಜೈಲುವಾಸ ಅನುಭವಿಸಲೇಬೇಕಾಗಿದೆ.

ಬೆಂಗಳೂರು, [ನ.13]: ಅಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಿಚಿವ ಜನಾರ್ದನ ರೆಡ್ಡಿ ಜಾಮೀನು ತೀರ್ಪು ನಾಳೆಗೆ [ಬುಧವಾರ] ಮುಂದೂಡಿದೆ.

ನವೆಂಬರ್ 12ರಂದು ಸೋಮವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದಾಗಿ ಕೋರ್ಟ್ ರಜೆ ಇತ್ತು.

ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ

 ಹಾಗಾಗಿ ಇಂದು [ಮಂಗಳವಾರ] ಜನಾರ್ದನ ರೆಡ್ಡಿ ಪರ ವಕೀಲ C.H.ಹನುಮಂತರಾಯ 1ನೇ ACMM ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 

ಆದರೆ, ನ್ಯಾಯಧೀಶ ಜಗದೀಶ್ ಅವರು ಜಾಮೀನು ತೀರ್ಪು ಅನ್ನ ನಾಳೆ ಅಂದರೆ ಬುಧವಾರಕ್ಕೆ ಮುಂದೂಡಿದ್ದಾರೆ. ಹೀಗಾಗಿ ಇಂದು ರಾತ್ರಿ ಕೂಡ ರೆಡ್ಡಿ ಜೈಲಿನಲ್ಲಿಯೇ ಕಳೆಯಬೇಕಿದೆ.

ಮತ್ತೊಂದೆಡೆ ರೆಡ್ಡಿಗೆ ಜಾಮೀನು ನೀಡದಂತೆ ಆಕ್ಷೇಪಣೆ ಪಡೆಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಒಂದು ವೇಳೆ ಬೇಲ್ ಕೊಟ್ಟರೆ ಆರೋಪಿ ಎಸ್ಕೇಪ್ ಆಗುತ್ತಾರೆ. 

ಹೀಗಾಗಿ ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು​ಸಿಸಿಬಿ ನಿರ್ಧರಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.