2015ರಲ್ಲಿ ವಾಸವಿದ್ದ ಸೆಲ್ ನಲ್ಲೇ ಜನಾರ್ದನ ರೆಡ್ಡಿಗೆ ವ್ಯವಸ್ಥೆ ಮಾಡಲಾಗಿದ್ದು, ಕೈದಿ ನಂಬರ್ ನೀಡಲಾಗಿದೆ/ ಹಾಗಾದ್ರೆ ಕೈದಿ ಸಂಖ್ಯೆ ಎಷ್ಟು? ಇಲ್ಲಿದೆ ನೋಡಿ

ಬೆಂಗಳೂರು, [ನ.11]: 14 ದಿನಗಳ ನ್ಯಾಯಾಂಗ ಬಂಧನದ ಮೇಲೆ ಇಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಜನಾರ್ದನ ರೆಡ್ಡಿಗೆ ವಿಚಾರಣಾಧೀನ ನಂಬರ್ ನೀಡಲಾಗಿದೆ.

ಜೈಲಿನ ಪ್ರೊಸಿಜರ್ ಮುಗಿಸಿದ ಅಧಿಕಾರಿಗಳು ರೆಡ್ಡಿಗೆ ವಿಚಾರಣಾಧೀನ ಕೈದಿಯಾಗಿ 10902 ಸಂಖ್ಯೆಯನ್ನು ಕೊಟ್ಟಿದ್ದು, ಜೈಲಿನ ಕ್ವಾರಂಟೈನ್ ವಿಐಪಿ ಸೆಲ್ ನೀಡಲಾಗಿದೆ.

ಜನಾರ್ದನ ರೆಡ್ಡಿಗೆ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರ ಜೈಲೇ ಗತಿ..!

ಜನಾರ್ದನ ರೆಡ್ಡಿ ಕೊಟ್ಟಿರುವ ಸೆಲ್ ನಲ್ಲಿ ಟಿವಿ, ಮಂಚ, ಬಿಸಿ ನೀರು ವ್ಯವಸ್ಥೆ ಇದೆ. ಅಂಬಿಡೆಂಟ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದರು. 

ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ

ಇಂದು ರೆಡ್ಡಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಬಳಿಕ ಅವರನ್ನು 1ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ನ್ಯಾಯಧೀಶ ಜಗದೀಶ್​ ಅವರು ರೆಡ್ಡಿ ಪರ ವಕೀಲರ ವಾದಗಳನ್ನು ತಿರಸ್ಕರಿಸಿದ್ದು,.ರೆಡ್ಡಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.