ಸಂವಿಧಾನ ಶಿಲ್ಪಿ ಡಾ. ಭೀಮಾರಾವ್ ಅಂಬೇಡ್ಕರ್ ಅವರ ಮತ್ತೊಂದು ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿರುವುದು ಜನರಲ್ಲಿ ಒಂದು ರೀತಿಯ ಆತಂಕ ಹುಟ್ಟುಹಾಕಿದೆ.
ಮೊರಾದಾಬಾದ್[ಜು.29] ಮಾಜೋಲಾದಲ್ಲಿನ ಡಾ. ಭೀಮಾರಾವ್ ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಲಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಅನೇಕ ಪ್ರತಿಮೆಗಳು ಹಾನಿಗೀಡಾಗುತ್ತಿರುವ ವಿವಾದದ ಬೆನ್ನಲ್ಲೇ ನಡೆದಿರುವ ಪ್ರಕರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಏಪ್ರಿಲ್ 6ರಂದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿಮಾಡಲಾಗಿತ್ತು. ಮತ್ತೊಂದು ಬೆಳವಣಿಗೆಯಲ್ಲಿ ಸತ್ನಾ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ಮಧ್ಯ ಪ್ರದೇಶ ಮತ್ತು ಉತ್ ತರ ಪ್ರದೇಶದ ಅನೇಕ ಕಡೆ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗುತ್ತಿದ್ದು ಅಲ್ಲಿನ ಸರಕಾರದ ವಿರುದ್ಧವೂ ಜನರು ಮಾತನಾಡಿದ್ದಾರೆ.
