ನವದೆಹಲಿ(ಏ.14):  ಇಲ್ಲಿನ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ-1ರ 'ಕಾವೇರಿ'ಯಲ್ಲಿ ಇಂದು(ಬುಧವಾರ) ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ‌ದಿನಾಚರಣೆ ಆಚರಿಸಲಾಗಿದೆ.

ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರೂ ಆದ ಡಾ.ಸಂದೀಪ್ ದವೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ‌ ಸಲ್ಲಿಸಿ, ಪುಷ್ಪಾರ್ಚನೆ‌ ಮಾಡಿದ್ದಾರೆ.

ಮಮತಾಗೂ, ಮೋದಿಗೂ ವ್ಯತ್ಯಾಸವೇ ಇಲ್ಲ: ಓವೈಸಿ

ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತರಾದ ವಿಜಯ ರಂಜನ್ ಸಿಂಗ್, ಅಪರ ನಿವಾಸಿ ಆಯುಕ್ತರಾದ ಗುರ್ನೀತ್ ತೇಜ್, ಉಪ ನಿವಾಸಿ ಆಯುಕ್ತರಾದ ಎಚ್.ಪ್ರಸನ್ನ ಹಾಗೂ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.