ಟಿಕೆಟ್ ವಿಚಾರದಲ್ಲಿ ಡೈಲಾಗ್ ಹೊಡೆದ ಅಂಬಿ

First Published 31, Mar 2018, 11:51 AM IST
Ambarish Reaction On MLA Ticket Issue
Highlights

ನಾನಂತೂ ಬಂದು 'ಬಿ' ಫಾರ್ಮ್ ತಗೆದುಕೊಳ್ಳಲ್ಲ, ಟಿಕೆಟ್'ಗೂ ಅರ್ಜಿ ಹಾಕಲ್ಲ. ಬೇಕಿದ್ರೆ ಟಿಕೆಟ್ ಕೊಡಿ, ಬೇಡವಾದ್ರೆ ನಿಮಗಿಷ್ಟ ಬಂದವರಿಗೆ ಕೊಟ್ಕೊಳಿ ಹೋಗಿ ಎಂದು ಅಂಬಿ ಡಿಟ್ಟವಾಗಿ ಉತ್ತರಿಸಿದ್ದಾರೆ. ಅಂಬರೀಶ್ ಈ ನಿಗೂಢ ನಡೆಗೆ ಕೆಪಿಸಿಸಿ ಅಧ್ಯಕ್ಷರಿಗೆ ತಲೆಬಿಸಿ ಮಾಡಿಕೊಂಡಿದೆ.

ಮಂಡ್ಯ(ಮಾ.31): ನಾನು ಯಾವತ್ತೂ ಟಿಕೆಟ್'ಗಾಗಿ ಅರ್ಜಿ ಹಾಕಿದವನಲ್ಲ, ಹಾಕೋದು ಇಲ್ಲ ಎಂದು ಮಾಜಿ ಸಚಿವ ಅಂಬರೀಶ್ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್'ಗೆ ಖಡಕ್ ಆಗಿ ಉತ್ತರಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಕರೆ ಮಾಡಿದ ಅಂಬರೀಶ್, ಅಪ್ಪಾಜಿ ಅವರನ್ನು ಮಂಡ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದೇ ವೇಳೆ ಪರಮೇಶ್ವರ್ ಟಿಕೆಟ್ ಬಗ್ಗೆ ಪ್ರಸ್ತಾಪಿಸಿದಾಗ, ಅಂಬರೀಶ್ ಬೇಕು ಎಂದು ಜನರು ಇಚ್ಚಿಸಿದ್ರೆ, ಪಕ್ಷಕ್ಕೆ ಬೇಕು ಅನಿಸಿದ್ರೆ ಟಿಕೆಟ್ ಕೊಡಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

loader