ಟಿಕೆಟ್ ವಿಚಾರದಲ್ಲಿ ಅಂಬಿ ಮುನಿಸು : ರೆಬೆಲ್ ಆಗಿದ್ದಾರೆ ಸ್ಟಾರ್

Ambarish Not Happy With Congress Ticket
Highlights

ಟಿಕೆಟ್ ಕೊಡುತ್ತೇವೆ ಎಂದರೂ ಕೂಡ ಅಂಬರೀಷ್ ಕೈಗೆ ಸಿಗುತ್ತಿಲ್ಲ.  ಮಂಡ್ಯ ಜಿಲ್ಲೆಯಲ್ಲಿ ಕೈ ಟಿಕೆಟ್ ಆಯ್ಕೆ ವಿಚಾರದಲ್ಲಿ ಅಂಬಿ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ತಮಗೆ ಮಾತ್ರ ಟಿಕೆಟ್ ಕೊಟ್ಟರೆ ಸಾಲದು, ತಮ್ಮ ಬೆಂಬಲಿಗರಿಗೂ ಕೂಡ ಟಿಕೆಟ್  ನೀಡಬೇಕು ಎಂದು ಅಂಬಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಮಂಡ್ಯ : ಟಿಕೆಟ್ ಕೊಡುತ್ತೇವೆ ಎಂದರೂ ಕೂಡ ಅಂಬರೀಷ್ ಕೈಗೆ ಸಿಗುತ್ತಿಲ್ಲ.  ಮಂಡ್ಯ ಜಿಲ್ಲೆಯಲ್ಲಿ ಕೈ ಟಿಕೆಟ್ ಆಯ್ಕೆ ವಿಚಾರದಲ್ಲಿ ಅಂಬಿ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ತಮಗೆ ಮಾತ್ರ ಟಿಕೆಟ್ ಕೊಟ್ಟರೆ ಸಾಲದು, ತಮ್ಮ ಬೆಂಬಲಿಗರಿಗೂ ಕೂಡ ಟಿಕೆಟ್  ನೀಡಬೇಕು ಎಂದು ಅಂಬಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್ ಪೇಟೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿ ಎಂದು ಅಂಬರೀಷ್ ಕೇಳುತ್ತಿದ್ದಾರೆ.  ಶ್ರೀರಂಗಪಟ್ಟಣದಿಂದ ಪುಟ್ಟೇಗೌಡ, ಕೆ.ಆರ್ ಪೇಟೆಯಲ್ಲಿ ಕಿಕ್ಕೇರೆ ಸುರೇಶ್, ಪಾಂಡವಪುರದಲ್ಲಿ ಎಲ್.ಡಿ ರವಿಗೆ ಟಿಕೆಟ್ ನೀಡಬೇಕು ಎಂದು ಅಂಬರೀಷ್ ಬೇಡಿಕೆ ಇಟ್ಟಿದ್ದಾರೆ.

 ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಟ್ಟರೆ ಮಾತ್ರ ತಾವು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಅಂಬರೀಷ್ ಹೇಳಿದ್ದಾರೆ.  ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿಸಿದ್ದೇಗೌಡ, ಪಾಂಡವಪುರದಲ್ಲಿ ಪುಟ್ಟಣಯ್ಯ ಅವರ ಪುತ್ರನಿಗೆ ಟಿಕೆಟ್ ಫೈನಲ್  ಆಗಿದ್ದು, ಕಾಂಗ್ರೆಸ್ ಈ ನಿರ್ಧಾರಕ್ಕೆ ಅಂಬರೀಷ್ ರೆಬಲ್ ಆಗಿದ್ದಾರೆ. ಸದ್ಯ  ಈ ಸಂಬಂಧ  ಅಂಬರೀಷ್ ಜೊತೆ ಸಂಧಾನ ಮಾತುಕತೆ ನಡೆಸಲು ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ.

loader