ಸಾವಿನ ಮನೆಗೆ ಹೋಗದ ಸತ್ಯ ಬಿಚ್ಚಿಟ್ಟ ಅಂಬಿ

Ambareesh Reveal Why Not attend Last rites
Highlights

  • ಅಭಿಮಾನಿಗಳು ಸಾವಿನ ಮನೆಯಲ್ಲೂ ತಮ್ಮನ್ನೂ ಸಂಭ್ರಮಿಸುತ್ತಾರೆ ಎನ್ನುವ ಅಂಬಿ
  • ದುಃಖದಲ್ಲಿರುವವರಿಗೆ ನೋವು ತರಿಸುವ ಕಾರಣ ಹೋಗುವುದಿಲ್ಲವಂತೆ 

ಬೆಂಗಳೂರು(ಜು.07) : ರೆಬಲ್ ಸ್ಟಾರ್ ಅಂಬರೀಶ್  ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಖಡಕ್ ಮಾತುಗಾರರು.

ತನ್ನ ನೇರನುಡಿಯ ಮಾತಿನ ಶೈಲಿಯಲ್ಲಿಯೇ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೇ ಅಂಬಿ ತಾವು ಯಾವುತ್ತು  ಸಾವಿನ ಮನೆಗಳಿಗೆ ಹೋಗುವುದಿಲ್ಲ. ತೀರ ಅನಿವಾರ್ಯದ ಕಾರಣಗಳಿದ್ದರೆ ಮಾತ್ರ ಹೋಗುತ್ತೇನೆ ಎನ್ನುತ್ತಾರೆ.

ಕಾರಣ ಕೇಳಿದರೆ ತಮಗಾದ ಹಿಂದಿನ ಘಟನೆಗಳನ್ನು ಬಿಚ್ಚಿಟ್ಟರು. ತಾವು ಅಂತಿಮ ದರ್ಶನಕ್ಕೆ ಹೋದಾಗ ಅಭಿಮಾನಿಗಳು ಸಾವಿನ ಮನೆಯಲ್ಲೂ ಸಂಭ್ರಮಿಸುತ್ತಾರೆ. ಹಲವು ಬಾರಿ ಈ ರೀತಿಯ ಅನುಭವಗಳಾಗಿವೆ. ಸಾವಿನ ಮನೆಯ ದುಃಖವನ್ನು ಮರೆತು ಜಯಘೋಷ ಹಾಕುತ್ತಾರೆ. ಇದು ತಮಗೆ ಇರುಸು ಮುರುಸು ಉಂಟುಮಾಡುತ್ತದೆ.ದುಃಖದಲ್ಲಿರುವ ಕುಟುಂಬದಲ್ಲಿ ಸನ್ಮಾನ ಸತ್ಕಾರ ನಡೆದರೆ ಅವಮಾನ ಆದಂತಲ್ಲವೆ. ಇದರಿಂದ ತಾವು ಸಾವಿನ ಮನೆಗಳಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.  

ರಾಜಕೀಯದಿಂದ ಸಂಪೂರ್ಣವಾಗಿ ಬಿಡುವು ಪಡೆದುಕೊಂಡಿರುವ ಅಂಬರೀಶ್ ಸಿನಿಮಾಗಳತ್ತಾ ಮತ್ತೆ ಮುಖ ಮಾಡಿದ್ದು ಸದ್ಯ ಸುದೀಪ್ ನಿರ್ಮಾಣದ ಅಂಬಿ ನಿನಗೆ ವಯಸ್ಸಾಯ್ತೋ, ಮುನಿರತ್ನರ ಕುರುಕ್ಷೇತ್ರ ಹಾಗೂ ರಾಜಸಿಂಹ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

 

loader