ಸೂಪರ್ ಸ್ಟಾರ್ ಪಾಲಿಟಿಕ್ಸ್ ಬಗ್ಗೆ ರೆಬೆಲ್ ಸ್ಟಾರ್ ಮಾತು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಕಳೆದ ಡಿ.31 ರಂದು ರಜನಿಕಾಂತ್ ಅಧಿಕೃತವಾಗಿ ಘೋಷಿಸಿದ್ದಾರೆ.

ಬೆಂಗಳೂರು: ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಿರುವ ಬಗ್ಗೆ ನಟ, ಶಾಸಕ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.

ಇಂದು ಬಹಳ ದಿನಗಳ ಬಳಿಕ ವಿಧಾನಸೌಧಕ್ಕೆ ಬಂದಿದ್ದ ಅಂಬರೀಶ್, ಮಾಧ್ಯಮದವರೊಡನೆ ಮಾತನಾಡಿದರು.

ರಜನಿಕಾಂತ್ ರಾಜಕೀಯ ಪ್ರವೇಶ ಬಗ್ಗೆ ಪ್ರಶ್ನೆಗೆ, 'ಇವತ್ತೇ ಬರೆದು ಇಟ್ಟುಕೊಳ್ಳಿ, ಶೂರ್ ವಿನ್ನರ್' ಎಂದು ಹೇಳಿದ್ದಾರೆ.

ತಾನು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಕಳೆದ ಡಿ.31 ರಂದು ರಜನಿಕಾಂತ್ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದ ತನ್ನ ಪಕ್ಷವು ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.

ನಿನ್ನೆ ತನ್ನ ಪಕ್ಷದ ಅಧಿಕೃತ ಲೋಗೊವನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.